ಬೆಂಗಳೂರು,ಸೆ.6- ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಸೈನ್ಸ್‍ನ ಪೆÇ್ರ.ಟಿ.ವಿಜಯಕುಮಾರ್ ಹಾಗೂ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸದ ಪೆÇ್ರ.ಬಿ.ಕಾಮಕೋಟಿ ವರು ಈ ಬಾರಿ ಪ್ರತಿಷ್ಠಿತ ಎಸಿಸಿಎಸ್-ಸಿಡಿಎಸಿ ಫೌಂಡೇಷನ್ ಅವಾರ್ಡ್‍ಗೆ ಆಯ್ಕೆಯಾಗಿದ್ದಾರೆ ಎಂದು ಎಸಿಸಿಎಸ್ ಅಧ್ಯಕ್ಷಡಾ.ಎಂ.ಸರಗೂರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಶಸ್ತಿಗಳನ್ನು ಅಡ್ವಾನ್ಸಡ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿದ್ವಾಂಸರಿಗೆ ಮತ್ತು ಸಂಶೋಧಕರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪೆÇ್ರ.ಕಾಮಕೋಟೆ ಅವರು ವಿಎಲ್‍ಎಸ್‍ಐ ಡಿಸೈನ್ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ಹಾಗೂ ಕಂಪ್ಯೂಟರ್ ಸಂರಚನ ವಲಯದಲ್ಲಿ ಭಾರತದ ಪ್ರಥಮ ಆರ್‍ಐಎಸ್‍ಸಿ-ವಿ ಪೆÇ್ರಸೆಸರ್ ಅಭಿವೃದ್ಧಿಪಡಿಸಿದ ಗಣನೀಯ ಕೊಡುಗೆಗಾಗಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪೆÇ್ರ.ವಿಜಯಕುಮಾರ್ ಅವರು ಡಬ್ಲ್ಯುಸಿಡಿಎಂಎ ಸೆಲ್ಯೂಲರ್ ಪ್ರಮಾಣಿತಗಳಲ್ಲಿ ಅಳವಡಿಸಲಾಗುವ ವೈರ್‍ಲೆಸ್ ಸಂವಹನ ವಿನ್ಯಾಸದಲ್ಲಿ ದೋಷ ಸರಿಪಡಿಸುವ ಕೋಡ್‍ಗಳ ಸಂರಚನೆಯಲ್ಲಿ ಮೂಲಾಧಾರ ಸ್ವರೂಪಿ ಸಂಶೋಧನೆ ನಡೆಸಿರುವುದಕ್ಕಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಎಸಿಸಿಎಸ್-ಡಿಸಿಎಸಿ ಫೌಂಡೇಷನ್ ಅವಾರ್ಡ್ ಒಂದು ಲಕ್ಷ ನಗದು, ಪ್ರಮಾಣ ಪತ್ರ ಒಳಗೊಂಡಿದ್ದು, ಇದೇ ಸೆ.21ರಂದು ಐಟಿಬಿಟಿಯಲ್ಲಿ ನಡೆಯಲಿರುವ ಅಡ್ವಾನ್ಸ್‍ಡ್ ಕಂಪ್ಯೂಟಿಂಗ್ ಅಂಡ್ ಕಮ್ಯೂನಿಕೇಷನ್ ವಾರ್ಷಿಕ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ತಿಳಿಸಿದರು.