ಪೈಲ್ವಾನ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಭರದಿಂದ ಸಾಗುತ್ತಿದೆ. ಚಿತ್ರದ ಪ್ರಮುಖ ಆಕ್ಷನ್ ದೃಶ್ಯ ಮುಗಿದಿದ್ದು ಅದರಲ್ಲಿ ಸುದೀಪ್, ಸುನಿಲ್ ಶೆಟ್ಟಿ, ಶರತ್ ಲೋಹಿತಾಶ್ವ, ಸುಶಾಂತ್ ಸಿಂಗ್ ನಟಿಸಿದ್ದಾರೆ. ಆಕಾಂಕ್ಷ ಸಿಂಗ್ ಅವರ ಭಾಗದ 10 ದಿನಗಳ ಶೂಟಿಂಗ್ ಮುಗಿದಿದೆ.ಇವೆಲ್ಲಕ್ಕಿಂತ ಮುಖ್ಯವಾಗಿ ಸುದ್ದಿಯಾಗಿದ್ದು ಸುದೀಪ್ ಅವರು ಪೈಲ್ವಾನನಾಗಿದ್ದು, ಶಾರೀರಿಕವಾಗಿ ಅವರ ರೂಪದಲ್ಲಿ ಬಹಳ ಬದಲಾವಣೆಯಾಗಿದೆ. ಮೊನ್ನೆ ಕಿಚ್ಚ ಸುದೀಪ್ ಹುಟ್ಟುಹಬ್ಬದ ದಿನ ಬಿಡುಗಡೆಯಾದ ಚಿತ್ರದ ಟೀಸರ್ ನಲ್ಲಿ ಚಿತ್ರಕ್ಕಾಗಿ ಅವರು ದೇಹ ಹುರಿಗೊಳಿಸಿದ್ದನ್ನು ತೋರಿಸಲಾಗಿತ್ತು. ಕಳೆದ 4 ತಿಂಗಳಿನಿಂದ ಅವರು ಇದಕ್ಕಾಗಿ ಸಮಯ ಮೀಸಲಿಟ್ಟಿದ್ದರು.ತಮ್ಮ ನೆಚ್ಚಿನ ನಟನನ್ನು ಹೊಸ ರೂಪದಲ್ಲಿ ನೋಡಿದ ಕಿಚ್ಚನ ಅಭಿಮಾನಿಗಳಿಗೆ ನಿಜಕ್ಕೂ ಖುಷಿಯಾಗಿದೆ. ಸುದೀಪ್ ಅವರು ಪ್ರಸ್ತುತ ಶೂಟಿಂಗ್ ಗೆ ವಿರಾಮ ತೆಗೆದುಕೊಂಡು ಕೆಸಿಸಿ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ನಂತರ ಇದೇ 10ರಂದು ಶೂಟಿಂಗ್ ತಂಡವನ್ನು ಸೇರಲಿದ್ದಾರೆ. ಹೈದರಾಬಾದ್ ನಲ್ಲಿ ಶೂಟಿಂಗ್ ಮುಗಿದ ನಂತರ ಕರ್ನಾಟಕದ ಒಳ ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.ಆರ್ ಆರ್ ಆರ್ ಪ್ರೊಡಕ್ಷನ್ ನಡಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ಸ್ವಪ್ನ ಕೃಷ್ಣ ಹಣ ಹೂಡಿದ್ದಾರೆ. ಕಬೀರ್ ದುಹಾನ್ ಸಿಂಗ್ ಕೂಡ ಇದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಕರುಣಾಕರ್ ಅವರ ಛಾಯಾಗ್ರಹಣವಿದೆ.
Seen By: 160 ಬೆಂಗಳೂರು: ಕೆಸಿಸಿ ಕ್ರಿಕೆಟ್ ಕಪ್ ಮುಗಿದಿದ್ದು, ಕೃಷ್ಣ ನಿರ್ದೇಶನಕ ಪೈಲ್ವಾನ್ ಚಿತ್ರದ ಶೂಟಿಂಗ್ ಗೆ ಸುದೀಪ್ ವಾಪಾಸಾಗಿದ್ದಾರೆ. ಸಿನಿಮಾಗೆ ಅಂತಾರಾಷ್ಟ್ರೀಯ ಫೈಟರ್ ಹಾಲಿವುಡ್ ನ [more]
Seen By: 115 ಸುದೀಪ್ ಅವರ ಪೈಲ್ವಾನ ಚಿತ್ರದ ಇತ್ತೀಚಿನ ಫೋಟೋವೊಂದು ವೈರಲ್ ಆಗಿದೆ. ಎಸ್ ಕೃಷ್ಣ ನಿರ್ದೇಶನದ ಕ್ರೀಡೆಯಾಧಾರಿತ ಚಿತ್ರವಾದ ಪೈಲ್ವಾನದಲ್ಲಿ ನಟ ಸುದೀಪ್ ಬಾಕ್ಸರ್ [more]
December 7, 2018VDಮನರಂಜನೆComments Off on ಟೀಕೆಗಳಿಗೆ ತಕ್ಕ ಉತ್ತರ: ಮತ್ತೆ ಕಟ್ಟು ಮಸ್ತಾದ ದೇಹ ಪ್ರದರ್ಶಿಸಿದ ಕಿಚ್ಚ ಸುದೀಪ್!
Seen By: 101 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪೈಲ್ವಾನ್ ಚಿತ್ರಕ್ಕಾಗಿ ಸಖತ್ ವರ್ಕ್ ಔಟ್ ಮಾಡುತ್ತಿದ್ದು ದೇಹವನ್ನು ದಂಡಿಸಿ, ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. [more]