ಬೆಂಗಳೂರು, ಸೆ.5- ಬೆಂಗಳೂರು ಮೂಲದ ಕನ್ ಫರ್ಮ್ ಟಿಕೆಟ್ ಸಂಸ್ಥೆ, ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವಂತಹ ರೈಲು ಮಾರ್ಗಗಳ ಪತ್ತೆಹಚ್ಚುವ ಕೆಲಸ ಮಾಡುತ್ತಿದೆ.
ಪ್ರಯಾಣಿಕರಿಗೆ ನೇರ ಮಾರ್ಗದಲ್ಲಿ ಟಿಕೆಟ್ ಸಿಗದಿದ್ದರೆ, ಪರ್ಯಾಯ ಮಾರ್ಗದಲ್ಲಿ ಟಿಕೆಟ್ ಒದಗಿಸುತ್ತದೆ. ಪ್ರಯಾಣಿಕರು ತಮ್ಮ ಸ್ಮಾರ್ಟ್ ಫೆÇೀನ್, ಆಂಡ್ರಾಯ್ಡ್ ಫೆÇೀನ್ ಗಳ ಮೂಲಕ ಈ ಸಂಸ್ಥೆಯ ಜಾಲತಾಣದಲ್ಲಿ ಟಿಕೆಟ್ ಬುಕ್ ಮಾಡಬಹುದು.
ಕನ್ ಫರ್ಮ್ ಟಿಕೆಟ್ ಸಂಸ್ಥೆಯ ಹೊಸ ಗ್ರಾಫ್ ಆಧಾರಿತ ತಂತ್ರಜ್ಞಾನವು ರೈಲುಗಳಲ್ಲಿ ಪ್ರಯಣಿಸುವವರಿಗೆ ಹೆಚ್ಚು ಸೀಟುಗಳ ಲಭ್ಯವಿವೆಯೇ ಎಂಬುದನ್ನು ವಿಶ್ಲೇಷಿಸುತ್ತದೆ. ಆ ಮೂಲಕ ಕೊನೆಯ ಕ್ಷಣದಲ್ಲೂ ಪ್ರಯಾಣಿಕರಿಗೆ ಟಿಕೆಟ್ ಸಿಗುವ ಸಾಧ್ಯತೆಗಳನ್ನು ತಿಳಿಸುತ್ತದೆ.
ಕನ್ ಫರ್ಮ್ ಟಿಕೆಟ್ ಸಂಸ್ಥೆಯ, ವಿಶ್ಲೇಷಣಾತ್ಮಕ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು, ನೇರ ಮಾರ್ಗದ ರೈಲು ಟಿಕೆಟ್ ಗಳು ಸಿಗದೇ ಇದ್ದಲ್ಲಿ, ಅಥವಾ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದ್ದಲ್ಲಿ, ಅಥವಾ ವೇಟಿಂಗ್ ಲಿಸ್ಟ್ ನಲ್ಲಿ ಇದ್ದರೆ, ಪರ್ಯಾಯ ಮಾರ್ಗಗಳನ್ನು ಪ್ರಯಾಣಿಸಲು ಸಲಹೆ ನೀಡುತ್ತದೆ. ಉದಾಹರಣೆಗೆ ಬೆಂಗಳೂರು- ಕೋಲ್ಕತ್ತ ಮಾರ್ಗದಲ್ಲಿ ಪ್ರಯಾಣಿಸುವವರು ವಿಶಾಖಪಟ್ನಂ ಮತ್ತು ಜೋಲಾರ್ ಪೇಟೆ ಮಾರ್ಗಗಳ ಮೂಲಕ ಪ್ರಯಾಣಿಸಬಹದು. ಕನ್ ಫರ್ಮ್ ಟಿಕೆಟ್ ಸಂಸ್ಥೆಯು, ಮಂಗಳವಾರ ಮತ್ತು ಬುಧವಾರದ ದಿನಗಳಲ್ಲಿ ಪ್ರಯಾಣದ ಅವಧಿಯನ್ನು ನಿಗದಿಪಡಿಸುವಂತೆ ಸಲಹೆ ನೀಡುತ್ತದೆ. ಕಾರಣ ಆ ದಿನಗಳಲ್ಲಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವುದಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.