ಬೆಂಗಳೂರು, ಸೆ.4- ಸಣ್ಣ ಉದ್ಯಮ ನಡೆಸುವವರಿಗೆ ಸಾಲ ಸೌಲಭ್ಯ ಕೊಡುತ್ತಿರುವ ಅಯ್ ಫೈನಾನ್ಸ್ ಸಂಸ್ಥೆ ಇದುವರೆಗೆ 8,641 ವ್ಯಾಪಾರಿಗಳಿಗೆ 157 ಕೋಟಿ ರೂ. ಸಾಲ ನೀಡಿ, ಉದ್ಯಮ ನಡೆಸಲು ನೆರವಾಗಿದೆ.
ನಗರದ ಯಲಹಂಕದ ಜಯಪ್ರಕಾಶ್ ಆರು ವರ್ಷಗಳಿಂದ ರೇಷ್ಮೆ ಸೀರೆ ನೇಯುವ ಕೆಲಸ ಮಾಡುತ್ತಿದ್ದರು. ಸ್ವಂತ ಕಚೇರಿಯನ್ನೂ ಹೊಂದಿದ್ದ ಅವರು ಅಯ್ ಫೈನಾನ್ಸ್‍ನಿಂದ ಸಾಲ ಪಡೆದು ಪ್ರಸ್ತುತ ಮೂರು ವಿದ್ಯುತ್ ಮಗ್ಗಗಳನ್ನು ಹೊಂದಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ.
ಕಡಿಮೆ ಬಡ್ಡಿ ಮತ್ತು ಸುಲಭವಾಗಿ ಮರುಪಾವತಿ ಮಾಡುವಂತಹ ಸೌಲಭ್ಯ ಹೊಂದಿರುವ ಅಯ್ ಫೈನಾನ್ಸ್ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದೆ. ತಮಿಳುನಾಡಿನಲ್ಲಿ 10, ಕರ್ನಾಟಕದಲ್ಲಿ 12, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ತಲಾ 7 ಶಾಖೆಗಳನ್ನು ಹೊಂದಿದೆ. ಈ ಆರ್ಥಿಕ ವರ್ಷದಲ್ಲಿ 14 ಶಾಖೆಗಳು ಆರಂಭವಾಗಿವೆ. ಮುಂದಿನ ತಿಂಗಳು ಮತ್ತೊಂದು ಶಾಖೆ ಸೇರ್ಪಡೆಯಾಗಲಿದೆ. ಒಟ್ಟಾರೆ 450 ಮಂದಿಗೆ ಸಂಸ್ಥೆ ಉದ್ಯೋಗ ನೀಡಿದೆ ಎಂದು ಸಂಸ್ಥೆಯ ದಕ್ಷಿಣ ವಿಭಾಗದ ಮುಖ್ಯಸ್ಥ ಬಾಲ ಮುರಳಿ ತಿಳಿಸಿದ್ದಾರೆ.