ಬೆಂಗಳೂರು: ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಮಲ್ಟಿಸ್ಟಾರ್ ಅಭಿನಯದ `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಸಂಕಷ್ಟ ಎದುರಾಗಿದೆ.
ಸೆನ್ಸಾರ್ ಮಂಡಳಿ `ದಿ ವಿಲನ್’ ಸಿನಿಮಾ ವೀಕ್ಷಿಸಿದ ಬಳಿಕ `ಎ’ ಸರ್ಟಿಫಿಕೇಟ್ ಕೊಡಲು ಮುಂದಾಗಿದೆ. ಆದರೆ `ಎ’ ಸರ್ಟಿಫಿಕೇಟ್ ಬಗ್ಗೆ ನಿರ್ದೇಶಕ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಲ್ಟಿಪ್ಲೆಕ್ಸ್ ನಲ್ಲಿ `ಎ’ ಸರ್ಟಿಫಿಕೇಟ್ ನೀಡುವುದರಿಂದ ಹೆಚ್ಚಿನ ಎಫೆಕ್ಟ್ ಆಗುತ್ತದೆ ಎಂದು ಚಿತ್ರತಂಡದ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಸೆನ್ಸಾರ್ ಮಂಡಳಿ `ಯು’ ಸರ್ಟಿಫಿಕೇಟ್ ನೀಡಲು ಮುಂದಾಗಿದ್ದು, `ಯು’ ಸರ್ಟಿಫಿಕೇಟ್ ಬೇಕಾದರೆ ಸಿನಿಮಾದಲ್ಲಿಯ 10 ನಿಮಿಷದ ದೃಶ್ಯವನ್ನು ಕತ್ತರಿಸುವುದಕ್ಕೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಆದರೆ ಇಷ್ಟು ಪ್ರಮಾಣದಲ್ಲಿ ಸಿನಿಮಾ ದೃಶ್ಯಕ್ಕೆ ಕತ್ತರಿ ಹಾಕಿದರೇ ಸಿನಿಮಾ ಮೌಲ್ಯ ಕಡಿಮೆಯಾಗುತ್ತದೆ ಎಂದು ಪ್ರೇಮ್ ಬೇಸರ ವ್ಯಕ್ತ ಪಡಿಸಿದ್ದಾರೆ.
ನಮ್ಮ ಸಿನಿಮಾದಲ್ಲಿ ಯಾವುದೇ ಅಶ್ಲೀಲತೆಯಿಲ್ಲ, ಆದರೆ ರಕ್ತಪಾತದಂತ 2 ಫೈಟ್ ಗಳಿಗೆವೆ, ರಕ್ತ ಪಾತವಿಲ್ಲದಿದ್ದರೇ ಅದನ್ನು ಫೈಟ್ ಎನ್ನಲಾಗದು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೆಲವು ಡೈಲಾಗ್ ಗಳಿದ್ದು, ಸೆನ್ಸಾರ್ ಬೋರ್ಡ್ ಅದಕ್ಕೂ ಆಕ್ಷೇಪ ವ್ಯಕ್ತ ಪಡಿಸಿದೆ. ಆದರೆ ಆ ದೃಶ್ಯಗಳನ್ನು ಕತ್ತರಿಸಲು ಸಾಧ್ಯವಿಲ್ಲ, ಅವೇ ಸಿನಿಮಾದ ಪ್ರಮುಕ ಭಾಗವಾಗಿದೆ. ಎಂದು ಹೇಳಿದ್ದಾರೆ,
ವಿಲ್ಲನ್ ಸಿನಿಮಾ ಆರು ವರ್ಷ ಮೇಲ್ಪಟ್ಟ ಮಕ್ಕಳೊಂದಿಗೆ ಕುಟುಂಬಸ್ಠರೆಲ್ಲರೂ ಕುಳಿತು ನೋಡಬೇಕೆಂಬುದು ನನ್ನ ಆಸೆ. ಆದರೆ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರಿ ನೀಡಿದರೇ ಅದರಿಂದ ತುಂಬಾ ಬೇಸರವಾಗುತ್ತದೆ. ಹೀಗಾಗಿ ಈ ಬಗ್ಗೆ ನಾನು ಚರ್ಚಿಸುತ್ತಿದ್ದೇನೆ. ಶೀಘ್ರವೇ ಬಿಡುಗಡೆ ದಿನಾಂಕ ತಿಳಿಸುತ್ತೇನೆ ಎಂದು ಪ್ರೇಮ್ ಹೇಳಿದ್ದಾರೆ.
ಗಣೇಶ ಹಬ್ಬಕ್ಕೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು, ಆದರ ಸಾದ್ಯತೆ ಕಡಿಮೆಯಿದೆ . ಸಿನಿಮಾದ ಮೂಲಕ ಪ್ರತಿಯನ್ನು ಸೆನ್ಸಾರ್ ಬೋರ್ಡ್ ಗೆ ನೀಡಲಾಗಿದೆ, ಆದರೆ ಇನ್ನೂ ಕೆಲವು ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸ ಬಾಕಿಯಿದೆ ಎಂದು ಹೇಳಿದ್ದಾರೆ.
ಅಭಿಮಾನಿಗಳನ್ನು ನಾನು ಹೆಚ್ಚಿನ ಸಮಯ ಕಾಯಲು ಬಿಡುವುದಿಲ್ಲ ಎಂದು ಹೇಳಿರುವ ಪ್ರೇಮ್ ರಿಲೀಸ್ ಗೂ 15 ದಿನ ಮೊದಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಲಾಗುವುದು ಎಂದು ಹೇಳಿದ್ದಾರೆ.