ಬಾಗಲಕೋಟೆಯಲ್ಲಿ ಬಿಜೆಪಿ ಮೇಲುಗೈ, ಬಾದಾಮಿಯಲ್ಲಿ ಸಿದ್ದುಗೆ ಸಮಾಧಾನ

ಬಾಗಲಕೋಟೆ : ಜಿಲ್ಲೆಯಲ್ಲಿ ಬಿಜೆಪಿಯೂ ವಿಧಾನಸಭೆ ಚುನಾವಣೆಯಂತೆಯೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಜಿಲ್ಲೆಯಲ್ಲಿ ನಡೆದ ಹನ್ನೇರಡು ಸ್ಥಳೀಯ ಸಂಸ್ಥೆಗಳಲ್ಲೂ ಹೆಚ್ಚಿನ ಅಧಿಕಾರ ಗಿಟ್ಟಿಸುವುದರ ಮೂಲಕ ತನ್ನ ಪಾರುಪತ್ಯ ಕಾಯ್ದುಕೊಂಡಿದೆ.
ಜಿಲ್ಲೆಯ ಐದು ನಗರಸಭೆ, ಐದು ಪುರಸಭೆ, ಎರಡು ಪಟ್ಟಣ ಪಂಚಾಯಿತಿಗಳ 312 ವಾರ್ಡ್​ಗಳ ಪೈಕಿ 309 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಜಯದುಂದುಬಿ ಮೊಳಗಿಸಿದೆ.
ಬಾಗಲಕೋಟೆ ನಗರಸಭೆ, ಮುಧೋಳ ನಗರಸಭೆ, ಇಳಕಲ್ ನಗರಸಭೆ, ರಬಕವಿ ಬನಹಟ್ಟಿ ನಗರಸಭೆ ಅಧಿಕಾರ ಬಿಜೆಪಿ ಪಾಲಾದರೆ, ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಅವರ ಜಮಖಂಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಮಖಂಡಿ ನಗರಸಭೆ ಕಾಂಗ್ರೆಸ್ ಪಾಲಾಗಿದೆ.
ಇನ್ನು ಬಾದಾಮಿ ಕ್ಷೇತ್ರದ ಮತದಾರರು ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈ ಹಿಡಿದಿದ್ದಾರೆ. ಬಾದಾಮಿ ಕ್ಷೇತ್ರ ವ್ಯಾಪ್ತಿಯ ಬಾದಾಮಿ ಪುರಸಭೆ ಹಾಗೂ ಗುಳೇದಗುಡ್ಡ ಪುರಸಭೆ ಕಾಂಗ್ರೆಸ್ ಪಾಲಾಗಿವೆ. ಕೆರೂರು ಪಟ್ಟಣ ಪಂಚಾಯತ್​ ಅತಂತ್ರವಾಗಿದೆ.
ರಬಕವಿ-ಬನಹಟ್ಟಿ ನಗರಸಭೆ ಬಿಜೆಪಿ ಪಾಲಾಗಿದ್ದು ಮಾಜಿ ಸಚಿವೆ ಉಮಾಶ್ರೀ ಅವರಿಗೆ ತೀವ್ರ ಮುಖಭಂಗವಾಗಿದೆ.

ಸಮಗ್ರ ಮಾಹಿತಿ ವಿವರ:
1)ಬಾಗಲಕೋಟೆ ನಗರಸಭೆ ಒಟ್ಟು ಸ್ಥಾನ-35
ಬಿಜೆಪಿ-29
ಕಾಂಗ್ರೆಸ್-5
ಪಕ್ಷೇತರ-1

2)ಮುಧೋಳ ನಗರಸಭೆ ಒಟ್ಟು 31 ಸ್ಥಾನ
ಬಿಜೆಪಿ-16
ಕಾಂಗ್ರೆಸ್-14
ಪಕ್ಷೇತರ-1

3)ಇಳಕಲ್ ನಗರಸಭೆ ಒಟ್ಟು ಸ್ಥಾನ 31
ಬಿಜೆಪಿ-20
ಕಾಂಗ್ರೆಸ್-8
ಜೆ ಡಿ ಎಸ್-2
ಪಕ್ಷೇತರ-1

4)ಜಮಖಂಡಿ ನಗರಸಭೆ ಒಟ್ಟು ಸ್ಥಾನ 31
ಬಿಜೆಪಿ-7
ಕಾಂಗ್ರೆಸ್-20
ಪಕ್ಷೇತರ-3
ಪಿಪಿಪಿ-1

5)ರಬಕವಿಬನಹಟ್ಟಿ  ನಗರಸಭೆ ಒಟ್ಟು ಸ್ಥಾನ 31
ಬಿಜೆಪಿ-23
ಕಾಂಗ್ರೆಸ್-5
ಪಕ್ಷೇತರ-2

6)ಬೀಳಗಿ ಪಪಂಚಾಯತ್ ಒಟ್ಟು ಸ್ಥಾನ 18
ಬಿಜೆಪಿ-11
ಕಾಂಗ್ರೆಸ್-6
ಪಕ್ಷೇತರ-1

7)ಹುನಗುಂದ ಪುರಸಭೆ ಒಟ್ಟು ಸ್ಥಾನ 23
ಬಿಜೆಪಿ-8
ಕಾಂಗ್ರೆಸ್-12
ಜೆ ಡಿಎಸ್ -3

8)ತೇರದಾಳ ಪುರಸಭೆ ಒಟ್ಟು ಸ್ಥಾನ 23
ಬಿಜೆಪಿ -10
ಕಾಂಗ್ರೆಸ್-10
ಪಕ್ಷೇತರ-3

9)ಕೆರೂರು ಪಪಂಚಾಯತ್ ಒಟ್ಟು ಸ್ಥಾನ
ಬಿಜೆಪಿ-9
ಕಾಂಗ್ರೆಸ್-6
ಪಕ್ಷೇತರ-5

10)ಬಾದಾಮಿ ಪುರಸಭೆ ಒಟ್ಟು 23
ಬಿಜೆಪಿ-10
ಕಾಂಗ್ರೆಸ್-13

11)ಗುಳೇದಗುಡ್ಡ ಪುರಸಭೆ ಒಟ್ಟು ಸ್ಥಾನ 23
ಬಿಜೆಪಿ-2
ಕಾಂಗ್ರೆಸ್-15
ಜೆ ಡಿ ಎಸ್-5
1 ಪಕ್ಷೇತರ ಅವಿರೋಧ

ಮಹಲಿಂಗಪುರ ಪುರಸಭೆ ಒಟ್ಟು ಸ್ಥಾನ 23
ಬಿಜೆಪಿ-14
ಕಾಂಗ್ರೆಸ್-9

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ