ಮೆಡಿಕಲ್ ಸೀಟು ಕೊಡಿಸುವುದಾಗಿ 40 ಮಂದಿಗೆ ವಂಚನೆ

ಬೆಂಗಳೂರು, ಸೆ.2-ಎಂಬಿಬಿಎಸ್ ಕೋರ್ಸ್‍ಗಳಿಗಾಗಿ ಆಡಳಿತ ಮಂಡಳಿ ಸೀಟುಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯಲ್ಲಿ ನಗರದ ಕಾಲೇಜುಗಳು ನಿರತವಾಗಿರುವಾಗಲೇ, ನಕಲಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಮೆಡಿಕಲ್ ಸೀಟುಗಳನ್ನು ಕೊಡಿಸುವುದಾಗಿ 40 ಮಂದಿಗೆ 5 ಕೋಟಿ ರೂ.ಗಳಷ್ಟು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಂಸ್ಥೆಗಳು ಮತ್ತು ವ್ಯಕ್ತಿಗಳು ಮೆಡಿಕಲ್ ಸೀಟುಗಳನ್ನು ಕೊಡಿಸುವುದಾಗಿ ವಂಚಿಸಿರುವ ಬಗ್ಗೆ ಕಳೆದ ಒಂದು ತಿಂಗಳ ಅವಧಿಯಲ್ಲಿ ನಗರದ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.
ಇಂಥ ಮಂದಿಯ ಆಮಿಷಕ್ಕೆ ಒಳಗಾಗಿ 40ಕ್ಕೂ ಹೆಚ್ಚು ಪೆÇೀಷಕರು 5 ಕೋಟಿ ರೂ.ಗಳಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಎಂಬಿಬಿಎಸ್ ಕೋರ್ಸ್‍ಗಳಿಗೆ ಪ್ರವೇಶ ಪರೀಕ್ಷೆ ಮೂಲಕ ಸ್ಥಾನ ಪಡೆಯಲು ವಿಫಲರಾದ ಆಕಾಂಕ್ಷಿಗಳಿಗೆ ಮ್ಯಾನೇಜ್‍ಮೆಂಟ್ ಕೋಟಾದಲ್ಲಿ ಸೀಟು ಕೊಡಿಸುವುದಾಗಿ ಕೆಲವು ನಕಲಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಪೆÇೀಷಕರು ಮತು ವಿದ್ಯಾರ್ಥಿಗಳಿಂದ 10 ಲಕ್ಷ ರೂ.ಗಳು ಮತ್ತು ಅದಕ್ಕಿಂತ ಹೆಚ್ಚು ಮೊತ್ತವನ್ನು ವಸೂಲಿ ಮಾಡಿ ವಂಚಿಸಿದ್ದಾರೆ.

ಎಂಬಿಬಿಎಸ್ ಕೋರ್ಸ್‍ಗಳ ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಕಾರ್ಯೋನ್ಮುಖರಾಗುವ ಸಂಘಟಿತ ಗ್ಯಾಂಗ್‍ನ ವಂಚಕರು ವಿವಿಧ ಮಾರ್ಗಗಳ ಮೂಲಕ ಅಮಾಯಕ ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡಿ ನಾಪತ್ತೆಯಾಗುತ್ತಾರೆ. ಪ್ರತಿ ವರ್ಷ ಇಂಥ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಬೆಂಗಳೂರಿನ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಮೆಡಿಕಲ್ ಸೀಟು ವಂಚನೆ ಪ್ರಕರಣಗಳ ಬಗ್ಗೆ ಹಲವಾರು ದೂರುಗಳು ದಾಖಲಾಗುತ್ತಿದ್ದು, ವಂಚಕರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಡಿಸಿಪಿ(ಕೇಂದ್ರ ವಿಭಾಗ) ದೇವರಾಜ್ ಮಾಹಿತಿ ನೀಡಿದ್ದಾರೆ.

ಈ ಗ್ಯಾಂಗ್ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮುಗ್ಧರನ್ನು ಬಲೆಗೆ ಬೀಳಿಸಿಕೊಳ್ಳುತ್ತದೆ. ಬಾಡಿಗೆ ಆಧಾರದ ಮೇಲೆ ಗೊತ್ತು ಮಾಡಲಾದ ಟೆಲಿಕಾಲರ್‍ಗಳು ಹಾಗೂ ಎಸ್‍ಎಂಎಸ್ ಸಂದೇಶಗಳ ಮೂಲಕ ಮೆಡಿಕಲ್ ಕಾಲೇಜುಗಳ ಆಡಳಿತ ಮಂಡಳಿಯಲ್ಲಿ ಖಾಲಿ ಇರುವ ಸೀಟುಗಳನ್ನು ಕೊಡಿಸಲು ಸಹಾಯ ಮಾಡುವುದಾಗಿ ಆಮಿಷವೊಡ್ಡಿ ಹಣ ವಸೂಲಿ ಮಾಡುತ್ತವೆ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದೇ ಉದ್ದೇಶಕ್ಕಾಗಿ ಈ ಗ್ಯಾಂಗ್‍ನವರು ನಕಲಿ ದಾಖಲೆಪತ್ರಗಳು ಮತ್ತು ಗುರುತು ಪ್ರಮಾಣಪತ್ರಗಳನ್ನು ನೀಡಿ ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ಅನೇಕ ಪ್ರಕರಣಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳಲು ತಮ್ಮ ಸೇವೆಗಾಗಿ ನೇರ ನಗದು ಹಣಕ್ಕಾಗಿ ಬೇಡಿಕೆ ಇಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಯಾರ್ಯಾರು ಶಾಮೀಲು..?
ಇಂಥ ವಂಚನೆ ಪ್ರಕರಣಗಳಲ್ಲಿ ಮೆಡಿಕಲ್ ಕಾಲೇಜುಗಳ ಉದ್ಯೋಗಿಗಳು ಹಾಗೂ ಆಡಳಿತ ಮಂಡಳಿ ಜೊತೆ ನಿಕಟ ಸಂಪರ್ಕ ಹೊಂದಿರುವ ಮಂದಿಯೂ ಶಾಮೀಲಾಗಿರುವ ನಿದರ್ಶನಗಳಿವೆ. ಅವರು ತಮ್ಮ ಹೆಸರುಗಳು ಬಹಿರಂಗಗೊಳ್ಳದಂತೆ ಕಾರ್ಯನಿರ್ವಹಿಸುತ್ತಾರೆ.
ಕೆಲವು ಕಾಲೇಜುಗಳೂ ಕೂಡ ಆಡಳಿತ ಮಂಡಳಿಯ ಕೋಟಾಗಳನ್ನು ಭರ್ತಿ ಮಾಡಲು ಮಧ್ಯವರ್ತಿಗಳನ್ನು ಸಂಪರ್ಕಿಸಿರುರವ ಉದಾಹರಣೆಗಳಿವೆ.
ಇನ್ನೂ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲಿ ಎಂಬಿಬಿಎಸ್ ಕೋರ್ಸ್‍ಗಳ ಮ್ಯಾನೇಜ್‍ಮೆಂಟ್ ಸೀಟುಗಳನ್ನು ಭರ್ತಿ ಮಾಡಲು ಕಾನೂನುಬದ್ದ ಮತ್ತು ಪಾರದರ್ಶಕ ಕ್ರಮಗಳನ್ನು ಅನುಸರಿಸುತ್ತಿವೆಯಾದರೂ, ಕೆಲವು ಶಿಕ್ಷಣ ಸಂಸ್ಥೆಗಳು ಆಡಳಿತ ಮಂಡಳಿ ಪಾಲಿನ ಸ್ಥಾನಗಳನ್ನು ತುಂಬಲು ಮಧ್ಯವರ್ತಿಗಳ ಮೂಲಕ ವಹಿವಾಟು ನಡೆಸುವುದು ಗುಟ್ಟಾಗೇನೂ ಉಳಿದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ