ಹೊಸದಿಲ್ಲಿ: ವಿದ್ಯಾರ್ಥಿಯಾಗಿರುವಾಗ ದೆನಾ ಬ್ಯಾಂಕ್ ನಮಗೆ ಪಿಗ್ಗಿ ಅಕೌಂಟ್ ತೆರೆಯಲು ಅವಕಾಶ ನೀಡಿತ್ತು. ಆದರೆ ನನ್ನ ಖಾತೆ ಸದಾ ಖಾಲಿಯಾಗಿರುತ್ತಿತ್ತು. ನಾನು ಹಳ್ಳಿ ಬಿಟ್ಟು ಬಂದಾಗ ಬಹಳ ವರ್ಷ ಖಾತೆ ಮುಂದುವರಿಸಿದ ಅಧಿಕಾರಿಗಳು ಆನಂತರ ನಾನಿರುವಲ್ಲಿಗೇ ಬಂದು ಸಹಿ ಪಡೆದು ಖಾತೆ ನಿಷ್ಕ್ರಿಯಗೊಳಿಸಿದರು. ಇದಾದ ಮೇಲೆ ಗುಜರಾತ್ನಲ್ಲಿ ಎಂಎಲ್ಎ ಆದ ನಂತರವೇ ಸಂಬಳಕ್ಕಾಗಿ ಖಾತೆ ತೆರೆದದ್ದು ಎಂದು ನೆನಪಿಸಿಕೊಂಡರು.
ನಿನ್ನೆ ಭಾರತೀಯ ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್ ಅನ್ನು ಲೋಕಾರ್ಪಣೆಗೊಳಿಸಿದ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದೇ ವೇಳೆ ಅಂಚೆ ನೌಕರರ ಪ್ರಾಮಾಣಿಕ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.