ನವದೆಹಲಿ: ಕಂಠಪೂರ್ತಿ ಕುಡಿದ ಪ್ರಯಾಣಿಕನೋರ್ವ ಮಹಿಳಾ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಏರ್ ಇಂಡಿಯಾ ಎಐ102 ಅಂತಾರಾಷ್ಟ್ರೀಯ ವಿಮಾನದಲ್ಲಿ ನಡೆದಿದೆ.
ಆಗಸ್ಟ್ 30ರಂದು ನಡೆದಿದ್ದ ಈ ಘಟನೆಗೆ ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯ ಸಂಸ್ಥೆಯ ಬಳಿ ವರದಿ ಕೇಳಿದೆ.
ಏರ್ ಇಂಡಿಯಾ ವಿಮಾನ ಎಐ102 ನ್ಯಾಯಾರ್ಕ್ ನಿಂದ ದೆಹಲಿಗೆ ವಾಪಸಾಗುತ್ತಿತ್ತು. ಮಹಿಳಾ ಪ್ರಯಾಣಿಕರ ಪುತ್ರಿ ಇಂದ್ರಾಣಿ ಘೋಷ್ ಈ ಘಟನೆ ಬಗ್ಗೆ ನಿನ್ನೆ ಟ್ವೀಟ್ ಮಾಡಿದ್ದಾರೆ.
ಒಬ್ಬರೇ ಪ್ರಯಾಣಿಸುತ್ತಿದ್ದ ನನ್ನ ತಾಯಿಗೆ ರಾತ್ರಿ ಭೋಜನ ಮುಗಿದ ನಂತರ ಪಾನಮತ್ತ ಪ್ರಯಾಣಿಕ ಅವರ ಸೀಟಿನ ಮೇಲೆ ಮೂತ್ರ ವಿಸರ್ಜಿಸಿ ತೀವ್ರ ತೊಂದರೆ ನೀಡಿದ್ದಾನೆ. ಈ ಬಗ್ಗೆ ತಕ್ಷಣವೇ ಗಮನಿಸಿ ಎಂದು ಟ್ವೀಟರ್ ನಲ್ಲಿ ಮನವಿ ಮಾಡಿದ್ದರು.
ಘಟನೆ ನಂತರ ಕಿರಿಯ ವಿಮಾನಯಾನ ಸಚಿವ ಜಯಂತ್ ಸಿನ್ಹಾ, ಘಟನೆ ಬಗ್ಗೆ ತಕ್ಷಣವೇ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಹೇಳಿದ್ದಾರೆ.
Drunk Man Urinates On Woman Passenger’s Seat In Air India Flight