ಹುಬ್ಬಳ್ಳಿ- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಸಂದರ್ಭದಲ್ಲಿ ಹುಬ್ಬಳ್ಖಿ ವಿಮಾನ ನಿಲ್ದಾಣಕ್ಕೆ ಆಗಮಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಅವಘಡ ಸಂಭವಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ವಿಮಾನಯಾನ ಪ್ರಾಧಿಕಾರ ತನಿಖೆಗೆ ಆದೇಶ ನೀಡಿತ್ತು. ಈಗ ತನಿಖಾ ವರದಿ ಬಹಿರಂವಾಗಿದ್ದು 20 ಸೆಕೆಂಡ್ ತಡವಾಗಿದ್ರು ವಿಮಾನ ಪತವಾಗುತ್ತಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಬಹಿರಂಗಪಡಿಸಿದೆ. ಏಪ್ರೀಲ್ 26 ರಂದು ಹೆಹಲಿಯಿಂದ ಚುನಾವಣೆ ಪ್ರಚಾರಕ್ಕೆ ಹುಬ್ಬಳ್ಳಿಗೆ ಆಗಮಿಸುವಾಗ ಈ ಅವಘಡ ಸಂಭವಿಸಿ, ಇಬ್ಬರು ಸದಸ್ಯರ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಿದ್ದು, ಸಮಿತಿ ವಿಮಾನದಲ್ಲಿನ ತಾಂತ್ರಿಕ ದೋಷವನ್ನು ಪತ್ತೆ ಹಚ್ವಿದೆ. 20 ಸೆಕೆಂಡ್ ಗಳಲ್ಲಿ ನಿಯಂತ್ರಣ ತಪ್ಪಿದ ವಿಮಾನವನ್ನು ನಿಯಂತ್ರಣಕ್ಕೆ ತಂದು ಫೈಲಟ್ ಗಳು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದರು. ಈ ಸಂಬಂಧ ಅಂದು ತಾಂತ್ರಿಕ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಫೈಲಟ್ ಗಳ ನಿಷ್ಕಾಳಜಿಯಿಂದ ಅವಘಡ ಸಂಭವಿಸುವದಿತ್ತು ಎಂದು ಕೆಪಿಸಿಸಿಯಿಂದ ದೂರು ದಾಖಲಾಗಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿ ಅವರು, ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಡಿಜಿಸಿಎ ಅಧಿಕಾರಗಳು ಆಗಮಿಸಿ ಪರಿಶೀಲನೆ ನಡೆಸಿದ್ದರು. ಆದ್ರೆ ಅವಘಡಕ್ಕೆ ತಾಂತ್ರಿಕ ದೋಷ ಕಾರಣ ಎಂಬುದು ಬಯಲಾಗಿದೆ. ಆ ಸಂದರ್ಭದಲ್ಲಿ ವಿಮಾನ 8 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿತ್ತು. ಮಾತ್ರವಲ್ಲದೆ ಒಂದು ಬದಿಗೆ ವಾಲಿತ್ತು. ಒಂದು ವೇಳೆ 20 ಸೆಕೆಂಡ್ ಗಲ್ಲಿ ವಿಮಾನ ಫೈಲಟ್ ನಿಯಂತ್ರಣಕ್ಕೆ ಬರದಿದ್ರೆ ವಿಮಾನ ಪತನವಾಗುತ್ತಿತ್ತು ಎಂದು ವರದಿ ಹೇಳಿದೆ.