ಬೆಂಗಳೂರು, ಆಗಸ್ಟ್ 29, 2018 : ಭಾರತೀಯ ಪರ್ಫಾರ್ಮೆನ್ಸ್ ಬ್ರಾಂಡ್ ಉಡುಪಿನಲ್ಲಿ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವ ಅಲ್ಸಿಸ್ ಸ್ಪೋಟ್ರ್ಸ್ ಕರ್ನಾಟಕದಲ್ಲಿ ತನ್ನ ಮೊದಲ ಸ್ಟೋರ್ ಪ್ರಾರಂಭಿಸಿ ಬ್ರಾಂಡ್ ಅನಾವರಣ ಮಾಡಿದೆ. ಬೆಂಗಳೂರಿನಲ್ಲಿ ಆರಂಭ ಆಗಿರುವ ಇದು ಹೊಸ ಮತ್ತು ಅಪರೂಪದ ಔಟ್‍ಲೆಟ್ ಆಗಿದೆ. ವೈಟ್‍ಫೀಲ್ಡ್‍ನ ಹೃದಯ ಭಾಗದಲ್ಲಿ ಇರುವ ಇದು ಇನೋರ್ಬಿಟ್ ಮಾಲ್‍ಲ್ಲಿದ್ದು ಅಲ್ಸಿಸ್ ಸ್ಪೋಟ್ರ್ಸ್ ಗ್ರಾಹಕರಿಗೆ ಹೊಸತನ ಪರಿಚಯಿಸುತ್ತಿದೆ. ಬ್ರಾಂಡ್‍ಗೆ ಗ್ರಾಹಕರು ಮತ್ತಷ್ಟು ಹತ್ತಿರ ಬರುವಂತೆ ಮಾಡಿದೆ.
ಅಲ್ಸಿಸ್ ಸ್ಪೋಟ್ರ್ಸ್ ಉಡುಪುಗಳನ್ನು ಅಥ್ಲೆಟಿಕ್ಸ್‍ಗಳಿಗೆ , ಓಡುವುದಕ್ಕೆ, ತರಬೇತಿಗೆ, ಯೋಗಾಸನಕ್ಕೆ, ಫುಟ್ಬಾಲ್ ಆಟಕ್ಕೆ, ಕ್ರಿಕೆಟ್‍ಗೆ ಹಾಗೂ ರಾಕೆಟ್ ಕ್ರೀಡೆಗೆ ಬೇಕಾದ ನಿರ್ದಿಷ್ಟ ಉಡುಪುಗಳು ಇಲ್ಲಿ ಲಭ್ಯ. ಅಲ್ಸಿಸ್ ತಾಯ್ನೆಲದಲ್ಲೇ ಬೆಳೆದ, ಪ್ರೀಮಿಯಂ ಧಿರಿಸನ ಬ್ರಾಂಡ್. ರಾಷ್ಟ್ರದಲ್ಲಿ ಹೊಸದಾಗಿ ಬರುತ್ತಿರುವ ಕ್ರೀಡಾ ಉಡುಪು ವಲಯದಲ್ಲಿ ಛಾಪು ಮೂಡಿಸಲು ಪ್ರವೇಶಿಸಿದೆ.
ಅನುಜ್ ಬಾತ್ರಾ, ಅಧ್ಯಕ್ಷ, ಅಲ್ಸಿಸ್ ಸ್ಪೋಟ್ರ್ಸ್ ಪ್ರಕಾರ ತಂತ್ರಜ್ಞಾನದ ನೆರವಿನಿಂದ ಸಿದ್ಧಪಡಿಸುವ ನಮ್ಮ ಸ್ಪೋಟ್ರ್ಸ್ ಉಡುಪಿಗೆ ಗ್ರಾಹಕರಿಂದ ದೊರೆತಿರುವ ಪ್ರೊತ್ಸಾಹದಿಂದ ಉತ್ತೇಜನಗೊಂಡು ನಾವು ಬೆಂಗಳೂರಿನಲ್ಲಿ ಸ್ಟೋರ್ ತೆರೆಯಲು ನಿರ್ಧರಿಸಿದೆವು. ಇದು ಕರ್ನಾಟಕದಲ್ಲಿ ತೆರೆಯುತ್ತಿರುವ ಮೊದಲ ವಿಶೇಷ ಬ್ರಾಂಡ್ ಸ್ಟೋರ್ ಆಗಿದೆ’ ಎಂದರು.
ರಾಷ್ಟ್ರದ 350 ಕ್ಕೂ ಅಧಿಕ ಮಲ್ಟಿ ಬ್ರಾಂಡ್ ಅಂಗಡಿಗಳಲ್ಲಿ ಅಲ್ಸಿಸ್ ಲಭ್ಯವಿದೆ. ಜತೆಗೆ ಫ್ರಾಂಚೈಸಿ ಮೂಲಕ ರಾಷ್ಟ್ರದ ಇತರ ಭಾಗಗಳಲ್ಲೂ ವಿಶೇಷ ಅಂಗಡಿ ತೆರೆಯಲು ಉದ್ದೇಶಿಸಿದೆ. ಭಾರತದ ಪ್ರಮುಖ ನಗರಗಳಲ್ಲಿ 15 ತನ್ನದೇ ಆದ ವಿಶಿಷ್ಟ ಬ್ರಾಂಡ್ ಸ್ಟೊರ್ ಆರಂಭಿಸಲು ಅಲ್ಸಿಸ್ ಉದ್ದೇಶಿಸಿದೆ.
ಭಾರತದ ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ಹಾಗೂ ಕಿರುತೆರೆಯ ಪ್ರಸಿದ್ಧ ಕಲಾವಿದರಾದ ಲಾರೆನ್ ಗೊಟ್ಲಿಯೆಬ್ ಹಾಗೂ ಕರಣ್ ಟಕರ್ ಅವರನ್ನು ಕಂಪನಿ ರಾಯಭಾರಿಗಳನ್ನಾಗಿ ನೇಮಕ ಮಾಡಿಕೊಂಡಿದೆ.