ಏಷ್ಯನ್ ಗೇಮ್ಸ್: ಮಂಜೀತ್‍ಗೆ ಚಿನ್ನ, ಜಿನ್ಸನ್, ಸಿಂಧುಗೆ ಬೆಳ್ಳಿ ಗರಿ

ಜಕರ್ತಾ: ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹತ್ತನೆ ದಿನ ಅಥ್ಲೀಟ್‍ಗಳಾದ ಮಂಜೀತ್ ಸಿಂಗ್ ಮತ್ತು ಜಿನ್ಸನ್ ಜಾನ್ಸನ್ ಪುರುಷರ 800ಮೀಟರ್ ಓಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ದಿನದ ಅಂತ್ಯಕ್ಕೆ ಒಳ್ಳೆಯ ಅಂತ್ಯ ನೀಡಿದ್ರು. ಇದರೊಂದಿಗೆ ಭಾರತ ದಿನದಾಂತ್ಯದಲ್ಲಿ ಒಟ್ಟು 1 ಚಿನ್ನ 5 ಬೆಳ್ಳಿ 2 ಕಂಚು ಗೆದ್ದುಕೊಂಡಿತು.
ಇದಕ್ಕೂ ಮುನ್ನ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಭಾರತ ಒಟ್ಟು 50 ಪದಕಗಳನ್ನ ಪಡೆದಿದೆ.
ಪುರುಷರ 800 ಮೀಟರ್ ಓಟದಲ್ಲಿ ಅಥ್ಲೀಟ್ ಮಂಜೀತ್ ಸಿಂಗ್ 1:46.15 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಪಡೆದು ಚಿನ್ನಕ್ಕೆ ಮುತ್ತಿಟ್ಟರು. ಭಾರತದ ಮತ್ತೋರ್ವ ಅಥ್ಲೀಟ್ ಕೇರಳದ ಜಾನ್ಸನ್ ಜಿನ್ಸನ್ ಏಷ್ಯಾನ್ ಚಾಂಪಿಯನ್‍ಶಿಪ್‍ನಲ್ಲಿ 0.20 ಸೆಕೆಂಡುಗಳಲ್ಲಿ ಗುರಿ ಮುಟ್ಟಿ 1:46.35 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಪಡೆದರು. ಇದರೊಂದಿಗೆ ಭಾರತ ಒಂದೇ ವಿಭಾಗದಲ್ಲಿ ಎರಡು ಪದಕಗಳನ್ನ ಗೆದ್ದ ಸಾಧನೆ ಮಾಡಿತು.
ಏಷ್ಯಾನ್ ಗೇಮ್ಸ್‍ನ 800ಮೀಟರ್ ವಿಭಾಗದಲ್ಲಿ ಭಾರತ ಕೊನೆಯದಾಗಿ ಗೆದ್ದಿದ್ದು 1982ರಲ್ಲಿ ಅಂದು ಅಥ್ಲೀಟ್ ಚಾಲ್ರ್ಸ ಬೊರೆಮೊ ಇದೇ ವಿಭಾಗದಲ್ಲಿ ಚಿನ್ನ ಗೆದಿದ್ದರು.

ಇನ್ನು ಬೆಳ್ಳಿ ಪದಕವನ್ನ 1951ರಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾನ್ ಗೇಮ್ಸ್ ನಲ್ಲಿ ರಂಜೀತ್ ಸಿಂಗ್ ಮತ್ತು ಕುಲ್ವಂತ್ ಸಿಂಗ್ ಗೆದ್ದಿದ್ದರು.
4-400 ಮೀ. ಮಿಕ್ಸಡ್ ವಿಭಾಗದಲ್ಲಿ ಬೆಳ್ಳಿ ಪದಕ
ದಿನದ ಅಂತ್ಯದಲ್ಲಿ ನಡೆದ 4-400ಮೀಟರ್ ಮಿಕ್ಸಡ್ ರಿಲೇ ವಿಭಾಗದಲ್ಲಿ ಮೊಹ್ಮದ್ ಅನಾಸ್, ಕನ್ನಡತಿ ಪೂವಮ್ಮ, ಅರೋಕಿಯಾ ರಾಜೀವ್, ಮತ್ತು ಹಿಮದಾಸ್ ತಂಡ 3:11.89 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಪಡೆಯಿತು.
ಮಹಿಳೆಯರ ಬ್ಯಾಡಿಂಟನ್ ವಿಭಾಗದಲ್ಲಿ ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು ವಿಶ್ವದ ನಂ.1 ಅಟಗಾರ್ತಿ ತೈ ಜು ಯಿಂಗ್ ವಿರುದ್ದ ಸೋಲುಕಂಡು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಇದಕ್ಕೂ ಮುನ್ನ ಪುರುಷ ಮತ್ತು ಮಹಿಳಾ ವಿಭಾಗದ ತಂಡದ ವಿಭಾಗಗಳಲ್ಲಿ ದಕ್ಷಿಣ ಕೊರಿಯಾ

ವಿರುದ್ಧ ಫೈನಲ್‍ನಲ್ಲಿ ಸೋತು ಬೆಳ್ಳಿ ಪದಕ ಪಡೆಯಿತು.
ಕುರಾಷ್ ವಿಭಾಗದಲ್ಲಿ ಅಚ್ಚರಿ ಎಂಬಂತೆ ಮಹಿಳೆಯರ 52 ಕೆ.ಜಿ. ವಿಭಾಗದಲ್ಲಿ ಭಾರತದ ಪಿಂಕಿ ¨ಲ್ಹಾರಾ ಬೆಳ್ಳಿ ಮತ್ತು ಮಲ್ಲಪ್ರಭಾ ಯಲ್ಲಪ್ಪ ಜಾದವ್ ಕಂಚಿನ ಪದಕ ಗೆದ್ದು ಮಿಂಚಿದ್ರು.
ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ ಆಡಿದ ಭಾರತ ಟೇಬಲ್ ಟೆನ್ನಿಸ್ ತಂಡ ಸೆಮಿಫೈನಲ್‍ನಲ್ಲಿ ಕೊರಿಯಾ ವಿರುದ್ಧ ಸೋತು ಕಂಚಿಗೆ ತೃಪ್ತಿಪಟ್ಟಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ