ನವದೆಹಲಿ: ಭಾರೀ ಮಳೆ ಹಾಗೂ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯದ ಜನತೆಯ ದುಃಖದಲ್ಲಿ ಇಡೀ ಭಾರತ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
47ನೇ ಆವೃತ್ತಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಅವರು, ಕೇರಳ ರಾಜ್ಯದ ಜನತೆಯ ದುಃಖದಲ್ಲಿ ಇಡೀ ಭಾರತ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ಪ್ರವಾಹದಲ್ಲಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗಾಗಿ ಸಂತಾಪವನ್ನು ಸೂಚಿಸುತ್ತೇವೆಂದು ಹೇಳಿದ್ದಾರೆ.
ವಾಯುಪಡೆ, ಸೇನೆ, ನೌಕಾದಳ, ಬಿಎಸ್ಎಫ್, ಸಿಐಎಸ್ಎಫ್, ಎನ್’ಡಿಆರ್’ಎಫ್ ಪಡೆಗಳು ಯಾವುದೇ ಪ್ರಯತ್ನಗಳು ವಿಫಲಗೊಳ್ಳದಂತೆ ನೋಡಿಕೊಳ್ಳುತ್ತಿದೆ. ಪ್ರವಾಹ ಪೀಡಿತ ಕೇರಳ ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಅವರ ಶ್ರಮ ಹಾಗೂ ಕಾರ್ಯವನ್ನು ಪ್ರಶಂಸಿಸುತ್ತೇನೆಂದು ತಿಳಿಸಿದ್ದಾರೆ.