ರಾಜ್ಯದ ಜನತೆ ಸಂಕಷ್ಟ ಆಲಿಸದ ಪ್ರಧಾನಿ; ಪರಿಹಾರ ಹಣವನ್ನೂ ನೀಡುತ್ತಿಲ್ಲ: ಖರ್ಗೆ ವಾಗ್ದಾಳಿ

ಯಾದಗಿರಿ:ಆ-25: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರಾಜ್ಯದ ಹಲವೆಡೆ ಅಪಾರ ಹಾನಿಯುಂಟಾಗಿದ್ದು, ಜನತೆ ಸಂಕಷ್ಟಕ್ಕೀಡಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ನೆರವಿಗೆ ಬಂದಿಲ್ಲ ಎಂದು ಲೋಕಸಭೆ ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಪ್ರವಾಹ ಪರಿಸ್ಥಿತಿಗೆ ಸಿಲುಕಿ ಸಂಕಷ್ಟಕ್ಕೀಡಾದರೂ ಜನತೆ ಮೊರೆ ಆಲಿಸದ ಮೋದಿ ಕೊನೆ ಪಕ್ಷ ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆಯನ್ನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೊಡಗಿನಲ್ಲಿ ಸಮೀಕ್ಷೆ ನಡೆಸಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರನ್ನು ಕಳುಹಿಸಿದ್ದಾರೆ. ಆದರೆ, ಅವರು ಜನರ ಸಮಸ್ಯೆ ಆಲಿಸುವ ಬದಲು ಅಲ್ಲಿ ವಾದ-ವಿವಾದ ಮಾಡಿ ತಕರಾರು ಮಾಡಿ ಹೋಗಿದ್ದಾರೆ ಎಂದು ರಕ್ಷಣಾ ಸಚಿವರ ನಡೆಯನ್ನು ಖಂಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ