ಲೋಕಸಭಾ ಚುನಾವಣೆ: ಬಿಜೆಪಿ ಮತ್ತು ವಿಪಕ್ಷಗಳ ಮೈತ್ರಿ ಕೂಟದ ನಡುವಿನ ನೇರ ಹಣಾಹಣಿ: ರಾಹುಲ್‌ ಗಾಂಧಿ

ಲಂಡನ್‌ :ಆ-25: 2019ರ ಲೋಕಸಭಾ ಚುನಾವಣೆಯು ಇದೇ ಮೊದಲ ಬಾರಿಗೆ ಆಳುವ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿ ಕೂಟದ ನಡುವಿನ ನೇರ ಹಣಾಹಣಿಯನ್ನು ಕಾಣಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಲಂಡನ್‌ ಸ್ಕೂಲ್‌ ಆಫ್ ಇಕಾನಮಿಕ್ಸ್‌ ನಲ್ಲಿನ ನ್ಯಾಶನಲ್‌ ಇಂಡಿಯನ್‌ ಸ್ಟೂಡೆಂಟ್ಸ್‌ ಆ್ಯಂಡ್‌ ಎಲುಮ್ನಿ ಯೂನಿಯನ್‌ (ಯುಕೆ) ಜತೆಗಿನ ಸಂವಾದಲ್ಲಿಮಾತನಾಡಿದ ರಾಹುಲ್, ದೇಶದ ಸಂವಿಧಾನವೂ ಸೇರಿದಂತೆ ಹಲವಾರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಮತ್ತು ದೇಶದಲ್ಲಿನ ಪ್ರಜಾಸತ್ತೆಯನ್ನು ಬುಡಮೇಲು ಮಾಡುತ್ತಿರುವ ಬಿಜೆಪಿ ವಿರುದ್ಧ ವಿಪಕ್ಷಗಳ ಮೈತ್ರಿಕೂಟವು ವ್ಯವಸ್ಥಿತ ದಾಳಿಯನ್ನು ಮುಂಬರುವ ಸಂಸದೀಯ ಚುನಾವಣೆಯಲ್ಲಿ ಸಂಘಟಿಸಲಿದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯು ಆಳುವ ಬಿಜೆಪಿ ವಿರುದ್ಧ ವಿಪಕ್ಷ ಮೈತ್ರಿಕೂಟ ನೇರ ಹಣಾಹಣಿಯನ್ನು ಕಾಣಲಿದೆ; ಇದು ದೇಶದಲ್ಲೇ ಪ್ರಪ್ರಥಮ ರೀತಿಯದ್ದಾಗಿರುತ್ತದೆ ಎಂದು ಹೇಳಿದರು.

“ಬಹಳ ಮುಖ್ಯ ಸಂಗತಿ ಎಂದರೆ ನಾನು ಪ್ರಜಾಸತ್ತೆಯಲ್ಲಿ ಕಾರ್ಯಾಚರಿಸುತ್ತಿದ್ದೇನೆ; ನನ್ನ ಮೇಲೆ ದಾಳಿ ನಡೆದಿದೆ; ನಾನೀಗ ಕಲಿತುಕೊಂಡಿದ್ದೇನೆ; ಮುಂದಿನ ಚುನಾವಣೆಯ ಮೂಲಕ ನಾನೇನು ಸಾದರ ಪಡಿಸಲಿದ್ದೇನೆ ಎಂಬುದನ್ನು ನೀವು ಕಾಣುವಿರಿ” ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ