ಲಖನೌ: 51 ವರ್ಷದ ಮಹಿಳೆ ಹೆಸರು ಮುಂದೆ ಸನ್ನಿ ಲಿಯೋನ್ ಫೋಟೋ… 51 ವರ್ಷದ ಮಹಿಳೆ ಹೆಸರು ಮುಂದೆ ಆನೆ ಫೋಟೋ… ಇದೇ ರೀತಿ ಹಲವರ ಹೆಸರಿನ ಮುಂದೆ ಪಾರಿವಾಳ, ಜಿಂಕೆ ಮತ್ತಿತರ ಫೋಟೋಗಳು….
ಇದೇನು ಅಂತ ಯೋಚಿಸ್ತಿದ್ದೀರಾ..? ಉತ್ತರ ಪ್ರದೇಶದ ಬಲ್ಲಿಯಾ ಸದರ್ ತಹ್ಶೀಲ್ನ ಪರಿಸ್ಕೃತ ಮತದಾರರ ಪಟ್ಟಿಯಲ್ಲಿ ಕಂಡು ಬಂದ ದೋಷಗಳಿವು. ಅಧಿಕಾರಿಗಳ ಬೇಜವಬ್ದಾರಿತನಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಎರಡು ಪುಟಗಳ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಈ ಅಚಾತುರ್ಯ ನಡೆದಿದ್ದು, ಈ ಸಂಗತಿ ಸೊಶಿಯಲ್ ಮೀಡಿಯಾದಲ್ಲಿ ತುಂಬಾ ಸುದ್ದಿ ಮಾಡುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಲ್ಲಿಯಾ ಪ್ರದೇಶದ ಹೆಚ್ಚುವರಿ ಜಿಲ್ಲಾಧಿಕಾರಿ, ಪರಿಷ್ಕೃತ ಮತದಾರರ ಪಟ್ಟಿಯಲ್ಲಿನ ಏಳರಿಂದ ಎಂಟು ಮತದಾರರ ಹೆಸರಿನ ಮುಂದೆ ಪ್ರಾಣಿ, ಪಕ್ಷಗಳ ಪೋಟೋ ಬಂದಿರುವುದು ತಿಳಿಯಿತು. ಇದಕ್ಕೆ ಆಪರೇಟರ್ ವಿಷ್ಣುದೇವ್ ಶರ್ಮ ಎಂಬಾತ ಕಾರಣವಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಈತನ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ.