ಆರು ಬಾಲ್​.. ಎಂಟು ಸೆಕೆಂಡ್​… ನೋ ಕ್ಯಾಚ್​ ಮಿಸ್​ : ಕ್ರಿಕೆಟರ್ಸ್​ಗೆ ಕೊಹ್ಲಿ ಚಾಲೆಂಜ್​…. ವಿಡಿಯೋ ನೋಡಿ !!!

ಸೌತಂಪ್ಟನ್: ಇತ್ತೀಚೆಗೆ ಸೋಷಿಯಲ್​ ಮೀಡಿಯಾಗಳಲ್ಲಿ ಸವಾಲು ಹಾಕುವ ಸಂಪ್ರದಾಯ ಬಹಳಾನೇ ಬೆಳೆಯುತ್ತಿದೆ.. ತಣ್ಣೀರು ಸುರಿಯುವ ಚಾಲೆಂಜ್.. ಯೋಗ ಮಾಡುವ ಕಸರತ್ತು ಹೀಗೆ ಪ್ರಧಾನಿಯಿಂದ ಹಿಡಿದು ಸೆಲಿಬ್ರಿಟಿಗಳ ವರೆಗೆ ಚಾಲೆಂಜ್​ ಸ್ವೀಕರಿಸಿ, ವಿಡಿಯೋ ಅಪ್​ಲೋಡ್​ ಮಾಡುವ ಹವ್ಯಾಸ ಬೆಳೆಯುತ್ತಲೇ ಇದೆ.

ವಿಷಯ ಅದಲ್ಲ, ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ  ಮಗೊಂದು ಚಾಲೆಂಜ್​ ಹಾಕಿದ್ದಾರೆ. ಕೊಹ್ಲಿ ಈ ಚಾಲೆಂಜ್​ ಹಾಕಿರುವುದು ಮಾಜಿ ಹಾಗೂ ಹಾಲಿ ಕ್ರಿಕೆಟರ್ಸ್​ಗಳಿಗೆ. ಯಾರಾದರೂ ಈ ಚಾಲೆಂಜ್​ ಸ್ವೀಕರಿಸಿ ಅತಿ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದೇ ಎಂದು ಚಾಲೆಂಜ್​ ಹಾಕಿದ್ದಾರೆ  ವಿರಾಟ್​ ಕೊಹ್ಲಿ.

ಅವರು ಹಾಕಿರೋದು ಈಜಿ ಸವಾಲು… ಅಂದಹಾಗೆ ಇದರಲ್ಲೇ ಇರೋದು ಟ್ವಿಸ್ಟ್​.. ಆ ಟ್ವಿಸ್ಟ್​ ಏನಪ್ಪ ಎಂದರೆ ಕೇವಲ ಎಂಟು ಸೆಕೆಂಡ್​ಗಳಲ್ಲಿ ವಿವಿಧ ಭಂಗಿಗಳಲ್ಲಿ… ಆರು ಬಾಲ್​ಗಳನ್ನ ಮಿಸ್​ ಮಾಡದೇ ಹಿಡಿದಿಕೊಳ್ಳಬೇಕು… ಅಂದಹಾಗೆ ಜಸ್ಟ್​  ಆರು ಬಾಲು.. ಎಂಟು ಸೆಕೆಂಡ್​… ಝೀರೋ ಮಿಸ್​…   ಇದು ಕ್ರಿಕೆಟರ್​ಗಳಿಗೆ ಕೊಹ್ಲಿ  ಹಾಕಿರುವ ಸವಾಲು… ಈ ಬಗ್ಗೆ ತಾವೇ ಆಟ ಆಡಿ.. ಅದನ್ನ ಟ್ವಿಟ್ಟರ್​ನಲ್ಲಿ ಅಪ್​ಲೋಡ್​ ಮಾಡುವ ಮೂಲಕ ಸವಾಲು ಹಾಕಿದ್ದಾರೆ.

ಈ ಸವಾಲನ್ನ ಅವರು,  ದಕ್ಷಿಣ ಆಫ್ರಿಕಾ ಆಟಗಾರ ಹರ್ಷಲ್ ಗಿಬ್ಸ್​,  ಹಾಲಿ ಇಂಡಿಯನ್​ ಕ್ರಿಕೆಟರ್​ ಕೆ.ಎಲ್​. ರಾಹುಲ್​,  ಜಾಂಟಿ ರೋಡ್ಸ್​, ರಶೀದ್​ ಖಾನ್​,  ಡುಪ್ಲೆಸಿ,  ಶಾಕಿಬ್​ ಅಲ್​ ಹಸನ್​ ಅವರಿಗೆ ಈ ಚಾಲೆಂಜ್​ ಪಾಸ್​ ಮಾಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ