ಜಕಾರ್ತ: ಏಷ್ಯನ್ ಗೇಮ್ಸ್-2018ರಲ್ಲಿ ಭಾರತಕ್ಕೆ 6ನೇ ಸ್ವರ್ಣ ಪದಕ ದೊರೆತಿದೆ. ಪುರುಷರ ಟೆನ್ನಿಸ್ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಸ್ವರ್ಣ ಗೆದ್ದು, ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ
ಇಂದು ನಡೆದ ಪುರುಷರ ಟೆನಿಸ್ ಡಬಲ್ಸ್ ಅಂತಿಮ ಪಂದ್ಯದಲ್ಲಿ ಕಜಕಿಸ್ತಾನ್ ಜೋಡಿಯನ್ನು 6-3, 6-4 ಅಂತರದಿಂದ ಮಣಿಸಿ, ಗೆಲವಿನ ನಗೆ ಬೀರಿದರು. ರೋಚಕ ಪಂದ್ಯದಲ್ಲಿ ಕೊನೆಗೂ ಚಿನ್ನ ಭಾರತದ ಪಾಲಾಯ್ತು.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಪಂದ್ಯದಲ್ಲಿ ಹೀನಾ ಸಿಧು ಅವರು ಕಂಚಿನ ಪದಕ ಗೆದ್ದರು. ಈವರೆಗೆ ಭಾರತಕ್ಕೆ 6 ಸ್ವರ್ಣ, 4 ಬೆಳ್ಳಿ, 13 ಕಂಚಿನ ಪದಕಗಳೊಂದಿಗೆ ಪಟ್ಟಿಯಲ್ಲಿ 9 ನೇ ಸ್ಥಾನ ಅಲಂಕರಿಸಿದೆ. ಇದುವರೆಗೆ ಭಾರತ ಗಳಿಸಿರುವ ಪದಕಗಳ ಒಟ್ಟು ಸಂಖ್ಯೆ 23.