ಟಿ 20 ಆವೃತ್ತಿಗೆ ನಿವೃತ್ತಿ ಘೋಷಿಸಿದ  ಜುಲ್ಹಾನ್‌ಗೋಸ್ವಾಮಿ

ನವದೆಹಲಿ :ಯುವ ಮಹಿಳಾ ಕ್ರಿಕೆಟ್‌ಆಟಗಾರ್ತಿಯರಿಗೆ ಸ್ಫೂರ್ತಿಯ ಚಿಲಿಮೆಯಾಗಿದ್ದಭಾರತ ಮಹಿಳಾ ತಂಡದಆಲ್‌ರೌಂಡರ್‌ಜುಲ್ಹಾನ್‌ಗೋಸ್ವಾಮಿ ಟಿ20 ಕ್ರಿಕೆಟ್‌ಆವೃತ್ತಿಗೆ  ನಿವೃತ್ತಿ ಘೋಷಿಸಿದ್ದಾರೆ.  35 ವರ್ಷದಜುಲ್ಹಾನ್‌ಗೋಸ್ವಾಮಿಅಂತಾರಾಷ್ಟ್ರೀಯಕ್ರಿಕೆಟ್‌ನಲ್ಲಿ ಮೈಲುಗಲ್ಲನ ಮುಟ್ಟಿದ್ದರು.

2006ರಲ್ಲಿ ಜುಲ್ಹಾನ್‌ಗೋಸ್ವಾಮಿಇಂಗ್ಲೆಂಡ್ ವಿರುದ್ಧ ಟಿ20 ಆಡುವ ಮೂಲಕ ಚುಟುಕು ಆವೃತ್ತಿಗೆ ಪದಾರ್ಪಣೆ ಮಾಡಿದ್ದರು. ಕಳೆದ ಜೂನ್‌ನಲ್ಲಿಕೊನೆಯ ಬಾರಿಗೆ ಟಿ20  ಏಷ್ಯಾಕಪ್‌ಟೂರ್ನಿಆಡಿದ್ದರು.

ಜುಲ್ಹಾನ್‌ಗೋಸ್ವಾಮಿ ಟಿ20 ಆವೃತ್ತಿಯಲ್ಲಿ 68 ಪಂದ್ಯಗಳನ್ನ ಆಡಿದ್ದು  56 ವಿಕೆಟ್‌ಗಳನ್ನ ಪಡೆದು 21.94 ಸರಾಸರಿ ಹೊಂದಿದ್ದಾರೆ.  2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ  11ರನ್‌ಗೆ 5ವಿಕೆಟ್ ಪಡೆದಿದ್ದುಅತ್ಯುತ್ತುಮ ಬೌಲಿಂಗ್‌ಆಗಿತ್ತು.

ಇನ್ನು ಬ್ಯಾಟಿಂಗ್ ನಲ್ಲೂ ರನ್‌ಗಳ ಮಳೆಯನ್ನ ಸುರಿಸಿದ್ದು  ೪೦೫ರನ್  ಬಾರಿಸಿ 10.94 ಸರಾಸರಿ ಹೊಂದಿದ್ದಾರೆ.  2014ರಲ್ಲಿ  ವಿಶಾಖಪಟ್ಟಣದಲ್ಲಿ  ಶ್ರೀಲಂಕಾ ವಿರುದ್ಧ  ನಡೆದ ಟಿ20  ಪಂದ್ಯದಲ್ಲಿಅಜೇಯ 37 ರನ್ ಬಾರಿಸಿದ್ದರು. ಇದುಅತಿ ಹೆಚ್ಚು ಗಳಿಸಿದ ರನ್‌ಆಗಿದೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ