ನವದೆಹಲಿ: ಹಿರಿಯ ಪತ್ರಕರ್ತ ಕುಲ್ದೀಪ್ ನಯ್ಯರ್ ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. 95 ವರ್ಷ ವಯಸ್ಸಿನ ನಯ್ಯರ್ ದೆಹಲಿಯ ಆಸ್ಪತ್ರೆಯಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ.
ಲೋಧಿ ರಸ್ತೆಯ ಸ್ಮಶಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಉರ್ದು ಪತ್ರಿಕಾ ವರದಿಗಾರನಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಕುಲದೀಪ್ ನಯ್ಯರ್ ಹಲವು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.
ಅವರು ಭಾರತದ ಒಬ್ಬ ಹಿರಿಯ ಪತ್ರಕರ್ತರು, ಪತ್ರಿಕಾ ಅಂಕಣಕಾರರು, ಮಾನವಹಕ್ಕು ಕಾರ್ಯಕರ್ತರು ಮತ್ತು ಲೇಖಕರು. ಅವರು ದಿ ಸ್ಟೇಟ್ಸ್ ಪತ್ರಿಕೆಯ ಸಂಪಾದಕರಾಗಿದ್ದರು. ಪತ್ರಿಕೋದ್ಯಮದ ಹೊರತಾಗಿ ಅವರು ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು.
ಕುಲದೀಪ್ ನಯ್ಯರ್ 1923 ರಂದು ಸಾಯಾಲ್ಕೋಟದಲ್ಲಿ ಜನಿಸಿದರು. ಕುಲ್ದೀಪ್ ನಯ್ಯರ್ ಲಾಹೋರ ನಲ್ಲಿ ಕಾನೂನು ಪದವಿಯನ್ನು ಪಡೆದರು. ಅವರು ಯುಎಸ್ಎ ಪತ್ರಿಕೋದ್ಯಮ ಪದವಿ ಪಡೆದರು. ಅಲ್ಲದೆ ತತ್ವಶಾಸ್ತ್ರದಲ್ಲಿ ಪಿಎಚ್ ಡಿ ಪಡೆದಿದ್ದರು.
ಅವರು ಹಲವು ವರ್ಷಗಳ ಕಾಲ ಭಾರತದ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಆಫೀಸರ್ ಆಗಿ ಕಾರ್ಯನಿರ್ವಹಿಸಿದ್ದರು. ಇದರ ನಂತರ, ಅವರು ಯುಎನ್ಐ, ಪಿಐಬಿ, ದಿ ಸ್ಟೇಟ್ಸ್ಮನ್ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಅವರು ದೀರ್ಘಕಾಲದ ಸಂಬಂಧ ಹೊಂದಿದ್ದರು