ಕಾಬೂಲ್:ಅಫ್ಘಾನಿಸ್ತಾನದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ತಾಲಿಬಾನ್ ಉಗ್ರರು ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರನ್ನ ಒತ್ತೆ ಇರಿಸಿಕೊಂಡಿದ್ದಾರೆ.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಕದನವಿರಾಮ ಉಲ್ಲಂಘನೆ ಮಾಡದಂತೆ ಕರೆ ನೀಡಿದ ದಿನವೇ ತಾಲಿಬಾನಿಗಳು ಈ ಕೃತ್ಯ ಎಸೆಗಿದ್ದಾರೆ. ತಾಲಿಬಾನ್ ದಂಗೆಕೋರರು, ಕುಂದುಜ್ ಪ್ರಾಂತ್ಯದಿಂದ ರಾಜಧಾನಿ ಕಾಬೂಲ್ಗೆ ಬರುತ್ತಿದ್ದ ಮೂರು ಬಸ್ಗಳನ್ನ ತಡೆದು ಅವರನ್ನೆಲ್ಲ ಅಪಹರಿಸಿ ಒತ್ತೆ ಇರಿಸಿಕೊಂಡಿದ್ದಾರೆ ಎಂದು ಕುಂದುಜ್ ಪ್ರಾಂತೀಯ ಕೌನ್ಸಿಲ್ನ ಮುಖ್ಯಸ್ಥ ಮೊಹಮ್ಮದ್ ಯೂಸೂಫ್ ಹೇಳಿಕೆ ನೀಡಿದ್ದಾರೆ.
ತಾಲಿಬಾನಿಗಳು ಸರ್ಕಾರಿ ನೌಕರರು ಹಾಗೂ ಭದ್ರತಾ ಸಿಬ್ಬಂದಿಗಳ ಸಂಬಂಧಿಕರನ್ನ ಗುರಿಯಾಗಿಸಿ ಈ ಕೃತ್ಯ ಎಸಗಿರಬಹುದು ಎಂದು ಅಯೂಬಿ ಶಂಕೆ ವ್ಯಕ್ತಪಡಿಸಿದ್ದಾರೆ.
Taliban take more than 100 hostage in Afghan bus ambush