ಬೆಂಗಳೂರು, ಆ.16- ಖ್ಯಾತ ಚಿತ್ರನಟರಾದ ಸುದೀಪ್, ರಮೇಶ್ ಅರವಿಂದ್, ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಕೃಷಿ ತಜ್ಞ ಡಾ.ಮಹದೇವಪ್ಪ, ಅರಗಿಣಿ ಮತ್ತು ಈ ಸಂಜೆ ವಿಶೇಷ ವರದಿಗಾರರಾಗಿರುವ ಎನ್.ಎಸ್.ರಾಮಚಂದ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಸಲ್ಲಿಸಿದ ಮಹನೀಯರುಗಳು ಪ್ರಸಕ್ತ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂದು ಸಂಜೆ ಪಾಲಿಕೆ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮೇಯರ್ ಸಂಪತ್‍ರಾಜ್ ಅವರು ಪುರಸ್ಕøತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ಪುರಸ್ಕøತರ ಪಟ್ಟಿ:
ಮಹದೇವಪ್ಪ, ಸುದೀಪ್, ಪ್ರದೀಪ್ ಆರ್ಯ, ಟಿ.ಎನ್.ಸೀತಾರಾಂ, ಸೃಜನ್ ಲೋಕೇಶ್, ಅನುಶ್ರೀ, ಕೂಡ್ಲು ರಾಮಕೃಷ್ಣ, ಬೆಂಗಳೂರು ನಾಗೇಶ್, ತಿಮ್ಮೇಗೌಡ, ಡಾ.ಕಾಮಿನಿ ರಾವ್, ಡಾ.ರವೀಂದ್ರ, ಅರುಳಾಲನ್, ಪಿ.ಧನಂಜಯ, ಡಾ.ಸಚ್ಚಿದಾನಂದ್, ಡಾ.ಎಂ.ವಿ.ಶ್ರೀನಿವಾಸ್, ತಲಕಾಡು ಚಿಕ್ಕರಂಗೇಗೌಡ, ಶ್ರೀನಿವಾಸ್ ಜಿ.ಕಪ್ಪಣ್ಣ, ಚೇತನ್, ಮಾಧ್ಯಮ ಕ್ಷೇತ್ರದಿಂದ ಎಂ.ನಾಗರಾಜ್, ರವಿಶಂಕರ್ ಭಟ್, ಬಿ.ಪಿ.ಮಲ್ಲಪ್ಪ, ಈ ಸಂಜೆ ಛಾಯಾಗ್ರಾಹಕ ಕ್ಯಾತನಹಳ್ಳಿ ಚಂದ್ರಶೇಖರ್, ಸುದರ್ಶನ್ ಚನ್ನಂಗಿಹಾಳ್, ಶಿವರಾಮ್, ರಾಘವೇಂದ್ರ ಗಣಪತಿ, ಧ್ಯಾನ್ ಪೂಣಚ್ಚ, ಬಿ.ಎನ್.ರಮೇಶ್, ಹೊನ್ನಾಚಾರ್, ಆಲ್‍ಫ್ರೆಡ್, ಸಿದ್ದರಾಜು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಂದಿ ಕೆಂಪೇಗೌಡ ಪ್ರಶಸ್ತಿ ಪಡೆಯುತ್ತಿದ್ದಾರೆ.
ಪ್ರಶಸ್ತಿ ಪುರಸ್ಕøತರಿಗೆ ನಾಡಪ್ರಭು ಕೆಂಪೇಗೌಡರ ಅಶ್ವಾರೂಢ ಪ್ರತಿಮೆ, ಪ್ರಶಸ್ತಿ ಪತ್ರ ಹಾಗೂ 15 ಸಾವಿರ ರೂ.ಗಳ ನಗದು ಬಹುಮಾನ ನೀಡಲಾಗುತ್ತದೆ.