ಟಿಎಕ್ಸ್3 ತಂತ್ರಜ್ಞಾನ ಮಾರುಕಟ್ಟೆಗೆ

Varta Mitra News

 

ಬೆಂಗಳೂರು, ಆ.14- ಎಡೆಲ್‍ವೈಸ್ ಪರ್ಸನಲ್ ವೆಲ್ತ್ ಅಡ್ವೈಸರಿ (ಇಪಿಡಬ್ಲುಎ)ಕಂಪೆನಿಯು ವರ್ತಕರ ಸಮಸ್ಯೆ ಪರಿಹಾರಕ್ಕಾಗಿ ಆಧುನಿಕ ತಂತ್ರಜ್ಞಾನದ ಟಿಎಕ್ಸ್3 ತಂತ್ರಜ್ಞಾನವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕಂಪೆನಿಯ ಆರ್ಥಿಕ ಸಲಹೆಗಾರರಾದ ರಾಹುಲ್ ಜೈನ್ ಅವರು, ಇಂದಿನ ನವ ಪೀಳಿಗೆಯಲ್ಲಿ ವರ್ತಕರು ಹೆಚ್ಚಿನ ವಹಿವಾಟು ನಡೆಸಲು ಹೆಚ್ಚಿನ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅವಶ್ಯಕ. ಈ ಸಂದರ್ಭದಲ್ಲಿ ಎದುರಾಗುವ ಕೆಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಈ ಸಾಧನವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಡೆಲ್‍ವೈಸ್ ಪರ್ಸನಲ್ ವೆಲ್ತ್ ಅಡ್ವೈಸರಿಯ ಡಿಜಿಟಲ್ ಗ್ರಾಹಕರ ನೆಲೆಯು ಕಳೆದ ಮೂರು ವರ್ಷಗಳಲ್ಲಿ 20 ಪಟ್ಟು ವೃದ್ಧಿಯಾಗಿದೆ; 2015ನೇ ಹಣಕಾಸು ವರ್ಷದಲ್ಲಿ 1.5 ಲಕ್ಷ ಇದ್ದ ಬಳಕೆದಾರರ ಸಂಖ್ಯೆ, 2018ನೇ ಹಣಕಾಸು ವರ್ಷದಲ್ಲಿ 30 ಲಕ್ಷ ತಲುಪಿದ್ದು, ಬಳಕೆದಾರರ ಸಂಖ್ಯೆಯಲ್ಲಿ ಕಳೆದ 3 ವರ್ಷಗಳಲ್ಲಿ 20 ಪಟ್ಟು ಏರಿಕೆ ಕಂಡುಬಂದಿದೆ. ಇದೇ ಪ್ರಗತಿಯ ಗತಿಯನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕಂಪನಿಯು ಸಕಾರಾತ್ಮಕವಾಗಿ ಮುನ್ನಡೆಯುತ್ತಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ