ಬೆಂಗಳೂರು, ಆ.14- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಶಾಸಕರಿಗೆ ಉಚಿತ ಪ್ರಯಾಣದ ಬಸ್‍ಪಾಸನ್ನು ನೀಡಲಾಗುತ್ತಿದೆ. 15ನೇ ವಿಧಾನಸಭೆಯ ಸದಸ್ಯರಿಗಾಗಿ ಉಚಿತ ಬಸ್‍ಪಾಸ್ ನೀಡಲು ರಾಜ್ಯ ವಿಧಾನಸಭೆ ಸಚಿವಾಲಯ ಕ್ರಮ ಕೈಗೊಳ್ಳುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬಸ್ ಪಾಸ್‍ಗಾಗಿ ಇದುವರೆಗೂ ಕೋರಿಗೆ ಸಲ್ಲಿಸದಿರುವ ಶಾಸಕರು ನಿಗದಿತ ನಮೂನೆಯಲ್ಲಿ ತಮ್ಮ ಮಾಹಿತಿ ಹಾಗೂ ಭಾವಚಿತ್ರಗಳನ್ನು ಶಾಸಕರ ಭವನದ ಲೆಕ್ಕಪತ್ರ ಶಾಖೆಗೆ ಸಲ್ಲಿಸುವಂತೆ ತಿಳಿಸಲಾಗಿದೆ.