ಆಸ್ಟ್ರೇಲಿಯಾ: ಮಾಡೆಲ್ವೋರ್ವಳು ತನ್ನ ಮಾಜಿ ಲವರ್ ಜತೆ ಸೇರಿ ಗಂಡನನ್ನೇ ಹತ್ಯೆ ಮಾಡಿರುವ ಘಟನೆ ಸಿಡ್ನಿಯಲ್ಲಿ ನಡೆದಿದೆ.
40 ವರ್ಷ ವಯಸ್ಸಿನ ಮಾಡೆಲ್ ರಾಕ್ವೆಲ್ ಹಚಿಸನ್ ತನ್ನ ಪತಿ ಬ್ರೆಟ್ ಎಂಬಾತನನ್ನು ಮೆಟ್ಟಿಲುಗಳ ಮೇಲಿಂದ ನೂಕಿ ಕೊಲೆ ಮಾಡಿದ್ದಾಳೆ. ಈ ಹೀನ ಕೃತ್ಯಕ್ಕೆ ಮಾಜಿ ಪ್ರೇಮಿಯ ಸಹಾಯ ಪಡೆದಿದ್ದಾಳೆ . ಸದ್ಯ ಪೊಲೀಸ್ ವಶದಲ್ಲಿರುವ ಆರೋಪಿ ರಾಕ್ವೆಲ್, ನನ್ನ ಪತಿ ಭೂತ, ಪ್ರೇತಗಳ ಆರಾಧಕ, ಮಂತ್ರವಾದಿಯಾಗಿದ್ದ. ಆತನಿಂದ ನನ್ನ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಕೊಲೆ ಮಾಡಿದೆ ಎಂದು ತಪ್ಪೊಪ್ಪಿಕೊಂಡಿದ್ದು, ಕೊಲೆ ಮಾಡಿರುವ ಬಗ್ಗೆ ಪಶ್ಚಾತಾಪವಿಲ್ಲ ಎಂದಿದ್ದಾಳೆ.
ಇನ್ನು ಪ್ರಕರಣದಲ್ಲಿ 7 ವರ್ಷದ ಬಾಲಕ ಸಾಕ್ಷಿಯಾಗಿದ್ದಾನೆ. ಬ್ರೆಟ್ ಹತ್ಯೆಯನ್ನು ತಾನು ಕಣ್ಣಾರೆ ಕಂಡಿರುವುದಾಗಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದಾನೆ.