ಪ್ರತಿ ಬಾರಿಯೂ ಶಿಖರ್ ಧವನ್ ಅವರನ್ನೇ ಬಲಿಪಶು ಮಾಡಲಾಗುತ್ತಿದೆ: ಕೊಹ್ಲಿ ನಿರ್ಧಾರಕ್ಕೆ ಗವಾಸ್ಕರ್ ಕಿಡಿ

ಮುಂಬೈ: ಲಾರ್ಡ್ಸ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಆಡಲು ಶಿಖರ್ ಧವನ್ ಗೆ ಅವಕಾಶ ನೀಡದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕಿಡಿಕಾರಿದ್ದಾರೆ.
ಭಾರತ ತಂಡ ವಿದೇಶ ಪ್ರವಾಸಕ್ಕೆ ತೆರಳಿದ್ದಾಗ ತಂಡದಲ್ಲಿ ಬದಲಾವಣೆ ಮಾಡಬೇಕಾಗಿ ಬಂದಾಗೆಲ್ಲ ಶಿಕರ್ ಧವನ್ ಅವರನ್ನೇ ಏಕೆ ಬಲಿಪಶು ಮಾಡಲಾಗುತ್ತದೆ ಎಂದು ಗವಾಸ್ಕರ್ ಪ್ರಶ್ನಿಒಸಿದ್ದಾರೆ. ಮೊದಲ ಟೆಸ್ಟ್ ನಲ್ಲಿ ಕಳಪೆ ಪ್ರದರ್ಶನ ತೋರಿದರೆಂದು ಧವನ್ ನಂತಹಾ ಎಡಗೈ ಬ್ಯಾಟ್ಸ್ ಮನ್ ಅವರನ್ನು ತಂಡದಿಂದ ಕೈಬಿಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟ ಗವಾಸ್ಕರ್ ಧವನ್ ಗಿಂತಲೂ ಕಡಿಮೆ ಸ್ಕೋರ್ ಮಾಡಿದ್ದ  ಮುರಳಿ ವಿಜಯ್ ಅವರನ್ನೇಕೆ ಬದಲಿಸಲಿಲ್ಲ ಎಂದು ಕೇಳೀದ್ದಾರೆ.
“ಶಿಖರ್ ಧವನ್ ಅವರನ್ನು ಹೊರಗಿಡುವ ನಿರ್ಧಾರವನ್ನು ನಾನು ಒಪ್ಪಲಾರೆ.. ಶಿಖರ್ ಧವನ್ ಯಾವಾಗಲೂ ಬಲಿಪಶುವಾಗುತ್ತಿದ್ದಾರೆ.ಕಳೆದ ಪಂದ್ಯದಲ್ಲಿ, ಮುರಳಿ ವಿಜಯ್ ಗಿಂತ ಹೆಚ್ಚು ರನ್ ಗಳನ್ನು ಧವನ್ ಗಳಿಸಿದ್ದರು.” ಗವಾಸ್ಕರ್ ಸೋನಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಪ್ರತಿ ಪಂದ್ಯದ ನಂತರಧವನ್ ಅವರನ್ನು ಕೈಬಿಡುವುದೇ ಆದರೆ ಅವರನ್ನು ಪ್ರವಾಸಕ್ಕೇಕೆ ಆಯ್ಕೆ ಮಾಡಿಕೊಳ್ಳುತ್ತೀರಿ? ಇನ್ನು ಮೊದಲ ಟೆಸ್ಟ್​ನಲ್ಲಿ ಕೆ.ಎಲ್. ರಾಹುಲ್ ಮುರಳಿ ವಿಜಯ್ ಇಬ್ಬರೂ ಉತ್ತಮ ಪ್ರದರ್ಶನ ನಿಡುವಲ್ಲಿ ವಿಫಲರಾಗಿದ್ದರು. ಅವರಿಬ್ಬರಿಬ್ಬರಿಗೂ ಹೋಲಿಸಿದರೆ ಧವನ್​ ಹೆಚ್ಚಿನ ರನ್ ಗಳಿಸಿದ್ದಾರೆ. ರಾಹುಲ್ ಭವಿಷ್ಯದ ಆಟಗಾರನೆಂದು ತಂಡದಲ್ಲಿ ಮುಂದುವರಿಸ್ದ್ದಾದರೆ ಮುರಳಿಯವರನ್ನೇಕೆ ಆಯ್ಕೆ ಮಾಡಿಕೊಂಡಿದ್ದಾರೆ ತಿಳಿಯುತ್ತಿಲ್ಲ.” ಹಿರಿಯ ಕ್ರಿಕೆಟ್ ಆಟಗಾರ ಬೇಸರ ವ್ಯಕ್ತಪಡಿಸಿದ್ದಾರೆ.
“ಧವನ್ ಗೆ ಈ ರೀರಿ ಅನ್ಯಾಯವಾಗುತ್ತಿರುವುದು ಇದೇ ಮೊದಲಲ್ಲ 2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಕೊನೆಯ ಎರಡು ಟೆಸ್ಟ್, ಆಸ್ಟ್ರೇಲಿಯಾ, ದ.ಆಫ್ರಿಕಾ ಸರಣಿಗಳಲ್ಲಿ ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದಿದ್ದಕ್ಕೆ ಅವರನ್ನು ತಂಡದಿಂದ ಕೈಬಿಡಲಾಗಿತ್ತು” ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ