ಲಂಡನ್: ಕನ್ನಡದ ಖ್ಯಾತ ನಟರಾದ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ರನ್ನು ಲಂಡನ್ ಪೊಲೀಸರು ಬಂಧಿಸಿದ್ದರು ಎಂದು ಹೇಳಲಾಗುತ್ತಿದೆ.
ಹೌದು. ಈ ಬಗ್ಗೆ ಸ್ವತಃ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದು, ವಸಿಷ್ಟಾ ಸಿಂಹ ಮತ್ತು ನಟಿ ಮಾನ್ವಿತಾರನ್ನು ಲಂಡನ್ ಪೊಲೀಸರು ಬಂಧಿಸಿದ್ದರು ಎಂದು ಹೇಳಿದ್ದಾರೆ. ಲಂಡನ್ ಖ್ಯಾತ ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್ ಎದುರು ವಸಿಷ್ಟಾ ಸಿಂಹ ಹಾಗೂ ನಚಿ ಮಾನ್ವಿತಾ ಡ್ಯುಯೆಟ್ ಹಾಡಿಗೆ ನೃತ್ಯ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಅಲ್ಲಿಗೆ ಲಂಡನ್ ಪೊಲೀಸ್ ಅಧಿಕಾರಿಯೊಬ್ಬರು ಇಬ್ಬರೂ ಯುವ ನಟರನ್ನು ಬಂಧಿಸಿದ್ದರು ಎಂದು ಹೇಳಿದ್ದಾರೆ.
ಚಿತ್ರೀಕರಣದ ನಿಮಿತ್ತ ಹಾಡಿಗೆ ಹೆಜ್ಜೆ ಹಾಕುತ್ತಿದ್ದ ನಟರು
ವಸಿಷ್ಠಾ ಸಿಂಹಾ ಹಾಗೂ ನಟಿ ಮಾನ್ವಿತಾ ನಾಗತಿ ಹಳ್ಳಿ ಚಂದ್ರ ಶೇಖರ್ ಅವರ ಇನ್ನೂ ಹೆಸರಿಡದ ಚಿತ್ರದಲ್ಲಿ ನಟೆಸುತ್ತಿದ್ದು, ಈ ಚಿತ್ರದ ಚಿತ್ರೀಕರಣದ ನಿಮಿತ್ತ ಅವರು ಹಾಡಿಗೆ ನೃತ್ಯ ಮಾಡುತ್ತಿದ್ದರಂತೆ ಇದೇ ವೇಳೆ ಅಲ್ಲಿಗೆ ಆಗಮಿಸಿದ್ದ ಪೊಲೀಸರು ಇವರನ್ನು ಪ್ರಶ್ನಿಸಿದ್ದರಂತೆ. ಬಳಿಕ ಚಿತ್ರತಂಡ ಪೊಲೀಸರಿಗೆ ಚಿತ್ರೀಕರಣದ ಅನುಮತಿ ಪತ್ರ ಮತ್ತು ಇತರೆ ದಾಖಲೆಗಳನ್ನು ಒದಗಿಸಿದ ಬಳಿಕ ಪೊಲೀಸ್ ಅಧಿಕಾರಿ ಚಿತ್ರೀಕರಣಕ್ಕೆ ಅನುವು ಮಾಡಿಕೊಟ್ಟು ಚಿತ್ರತಂಡಕ್ಕೆ ಶುಭಕೋರಿ ಅಲ್ಲಿಂದ ತೆರಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಘಟನೆಯ ಬಗ್ಗೆ ವಿವರಿಸಿದ್ದಾರೆ. ಜತೆಗೆ ಮಾನ್ವಿತಾ ಹರೀಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಚಿತ್ರೀಕರಣಕ್ಕಾಗಿ ಲಂಡನ್ ಗೆ ತೆರಳಿರುವ ಚಿತ್ರತಂಡ, ಸುಮಾರು 40 ದಿನಗಳ ಕಾಲ ಅಲ್ಲಿಯೇ ಶೂಟಿಂಗ್ ಮಾಡಲು ಪ್ಲಾನ್ ಹಾಕಿಕೊಂಡಿದೆ. ಬಕಿಂಗ್ ಹ್ಯಾಮ್ ಪ್ಯಾಲೆಸ್ ಸೇರಿದಂತೆ ಲಂಡನ್ ನ ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ಮಾಡಲಾಗುತ್ತಿದೆ, ಚಿತ್ರದಲ್ಲಿ ಇಡೀ ಲಂಡನ್ ಚಿತ್ರಣ ಇರಲಿದೆ ಎಂದು ಚಿತ್ರತಂಡ ಹೇಳಿದೆ. ಈ ಚಿತ್ರಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಪುತ್ರಿ ಕನಸು ಕಥೆಯನ್ನು ಬರೆದಿದ್ದು, ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.