ತಿರುವನಂತಪುರಂ: ಆ-11: ವರುಣನ ರೌದ್ರಾವತಾರಕ್ಕೆ ತತ್ತರಿಸಿ ಹೋಗಿರುವ ದೇವರನಾಡು ಕೇರಳದಲ್ಲಿ ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ 29ಕ್ಕೆ ಏರಿಕೆಯಾಗಿದ್ದು, ಇನ್ನಷ್ಟು ಏರಿಕೆಯಾಗಿವ ಸಾಧ್ಯತೆಯಿದೆ. ಪ್ರವಾಹ, ಭೂಕುಸಿತ ಸೇರಿದಂತೆ ವಿವಿಧ ಅನಾಹುತಗಳಿಗೆ 54,000ಕ್ಕೂ ಹೆಚ್ಚು ಜನರು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಈ ನಡುವೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರು ವೈಮಾನಿಕ ಸಮೀಕ್ಷೆ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ರಾಜ್ಯದ ಅರ್ಧಕ್ಕೂ ಹೆಚ್ಚು ಪ್ರದೇಶದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಸ್ತೆ, ಸೇತುವೆಗಳು ಕೊಚ್ಚಿ ಹೋಗಿವೆ. ಹಲವೆಡೆ ಪ್ರದೇಶಗಳು ದ್ವೀಪದಂತಾಗಿದ್ದು, ಊರುನಿಂದ ಊರಿಗೆ ಸಂಪರ್ಕವನ್ನೇ ಕಳೆದುಕೊಂಡಿವೆ.
ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ 14 ಜಿಲ್ಲೆಗಳ ಪೈಕಿ ಏಳು ಜಿಲ್ಲೆಗಳಲ್ಲಿ ಭಾರೀ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದ ಅಲಪುಳ, ಎರ್ನಾಕುಲಂ, ಕೊಟ್ಟಾಯಂ, ಮಲಪ್ಪುರಂ, ಕಲ್ಲಿಕೋಟೆ ಮತ್ತು ಪಾಲಕ್ಕಾಡ್ ನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು ಆಗಸ್ಚ್ 14ರವರೆಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಸೇನೆಯ ಐದು ತಂಡಗಳು ಮತ್ತು ಎನ್ ಡಿಆರ್ ಎಫ್ 7 ತಂಜಗಳನ್ನು ಪರಿಹಾರ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಇದೇ ವೇಳೆ, ಭಾರತೀಯ ನೌಕಾಸೇನೆಯ ದಕ್ಷಿಣ ಕಮಾಂಡ್ ಪಡೆ ಆಪರೇಷನ್ ಮದದ್ ಆರಂಭಿಸಿದ್ದು ಸಂತ್ರಸ್ತರ ರಕ್ಷಣೆಗೆ ಮುಂದಾಗಿದೆ.
ಇನ್ನು ಪ್ರವಾಸಿ ತಾಣ ಮುನ್ನಾರ್ ನಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 54 ಪ್ರವಾಸಿಗರನ್ನು ಸೇನೆ ರಕ್ಷಣೆ ಮಾಡಿದೆ. ಇನ್ನೂ ಸಾಕಷ್ಟು ಪ್ರವಾಸಿಗರು ರೆಸಾರ್ಟ್ ನಲ್ಲಿ ಇರುವ ಕುರಿತು ಮಾಹಿತಿ ಇದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ಸಾಗಿದೆ.
Kerala heavy rain,killed 29 people, Chief Minister Vijayan Pinarayi,visited flood-hit districts