ಬೆಂಗಳೂರು, ಆ.6-ನಗರದ ಚಾಲುಕ್ಯ ಸರ್ಕಲ್ನಲ್ಲಿರು ಪ್ರತಿಷ್ಠಿತ ಸೋಫಿಯಾ ಶಾಲೆಯಲ್ಲಿ ಹಾವು ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಕ್ಷಣ ಕಾಲ ಆತಂಕಕ್ಕೀಡಾದ ಘಟನೆ ನಡೆಯಿತು.
ಕ್ರೀಡಾ ಸಾಮಗ್ರಿಗಳನ್ನು ಇಡುವ ಕೊಠಡಿಯಲ್ಲಿ ಹಾವು ಸೇರಿಕೊಂಡಿತ್ತು. ಬ್ಯಾಸ್ಕೆಟ್ಬಾಲ್ ತರಲು ದೈಹಿಕ ಶಿಕ್ಷಕ ಕೊಠಡಿಯೊಳಗೆ ತೆರಳಿದಾಗ ಹಾವು ಶಿಕ್ಷಕರ ಕಣ್ಣಿಗೆ ಕಾಣಿಸಿದೆ. ಕೂಡಲೇ ಕೊಠಡಿಯಿಂದ ಹೊರಗೆ ಓಡಿ ಬಂದಿದ್ದಾರೆ.
ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು, ಕೂಡಲೇ ಬಿಬಿಎಂಪಿ ವನ್ಯಜೀವಿ ಸ್ವಯಂಸೇವಕ ಮೋಹನ್ ಅವರಿಗೆ ಹಾವು ಇರುವುದರ ಬಗ್ಗೆ ಮಾಹಿತಿ ನೀಡಲಾಯಿತು.
ಸ್ಥಳಕ್ಕೆ ಧಾವಿಸಿದ ಮೋಹನ್, ಕೊಠಡಿಯೊಳಗಿದ್ದ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 5 ಅಡಿ ಉದ್ದದ ಕೇರೆ ಹಾವು ಕಂಡು ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿ ಆಶ್ಚರ್ಯಗೊಂಡರು.