ಬೆಂಗಳೂರು,ಆ.6-ನಗರದಲ್ಲಿ ಹೆಚ್ಚಿರುವ ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟಲು ಕಠಿಣ ಕ್ರಮ ವಹಿಸುವಂತೆ ಮನವಿ ಮಾಡಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.
ಅಶೋಕ್ ನೇತೃತ್ವದಲ್ಲಿ ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್ಸ್ ದಂಧೆ ತಡೆಗೆ ಒತ್ತಾಯಿಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಧಾನಿ ಬೆಂಗಳೂರಿನ ಏರ್‍ಪೆÇೀರ್ಟ್ ಸುತ್ತಮುತ್ತಲು ಡ್ರಗ್ಸ್ ತಯಾರಿಕೆ ನಡೆಯುತ್ತಿದೆ. ಇದನ್ನು ಹೊರ ದೇಶಗಳಿಗೂ ಕಳುಹಿಸುವಂತಹ ಜಾಲ ಹಬ್ಬಿದೆ. ಈ ಬಗ್ಗೆ ಅಧಿವೇಶನದಲ್ಲಿ ಗೃಹ ಸಚಿವರೇ ತಿಳಿಸಿದ್ದರು.
ಡ್ರಗ್ಸ್ ಮಾಫಿಯಾದ ದೊಡ್ಡ ದಂಡೇ ಬೆಂಗಳೂರಿನಲ್ಲಿದೆ. ಅದರಲ್ಲೂ ಕೂಲಿಕಾರ ಕುಟುಂಬದ ಅದೆಷ್ಟೊ ಮಂದಿ ಡ್ರಗ್ಸ್ ವ್ಯಸನಿಗಳಾಗಿದ್ದಾರೆ. ನಮಗೆ ಬಂದ ಮಾಹಿತಿ ಪ್ರಕಾರ ಐದು ಲಕ್ಷಕ್ಕೂ ಹೆಚ್ಚು ಮಂದಿ ಡ್ರಗ್ಸ್ ವ್ಯಸನಿಯಾಗಿದ್ದಾರೆ. ಈ ವಿಚಾರವನ್ನು ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದೆವು.
ಈ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾಫಿಯವನ್ನು ತಡೆಗಟ್ಟಲು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು.