ಉದ್ಯಾನನಗರಿಯ ಹಲವು ಬಾರ್ ಮತ್ತು ಪಬ್‍ಗಳು ಬಂದ್ ಸಾಧ್ಯತೆ

 

ಬೆಂಗಳೂರು, ಆ.4-ಬಾರ್‍ಗಳು ಮತ್ತು ಪಬ್‍ಗಳಲ್ಲಿ ಸಂಗೀತಗೋಷ್ಠಿ ಮತ್ತಿತರ ಮನರಂಜನೆಗಳನ್ನು ನಿರ್ಬಂಧಿಸಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬೆಂಗಳೂರು ನಗರ ಪೆÇಲೀಸರು ಕಾರ್ಯೋನ್ಮುಖವಾಗಿದ್ದಾರೆ. ಈ ಹಿನ್ನಲೆಯಲ್ಲಿ ಉದ್ಯಾನನಗರಿಯ ಅನೇಕ ಬಾರ್ ಮತ್ತು ಪಬ್‍ಗಳು ಬಂದ್ ಆಗುವ ಸಾಧ್ಯತೆ ಇದ್ದು, ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.
ಬಾರ್ ಮತ್ತು ಪಬ್‍ಗಳಲ್ಲಿ ವಾದ್ಯಗೋಷ್ಠಿಗಳು, ಸಂಗೀತ ಕಾರ್ಯಕ್ರಮಗಳಂಥ ಮನರಂಜನೆಗಳಿಗೆ ಲೈಸನ್ಸ್ ಪಡೆಯುವುದು ಕಡ್ಡಾಯ. ಈ ನಿಯಮ ಪಾಲಿಸದ ಮಾಲೀಕರು ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಈ ವರ್ಷ ಜನವರಿಯಲ್ಲಿ ಆದೇಶ ನೀಡಿತ್ತು.

ಬೆಂಗಳೂರು ನಗರ ಪೆÇಲೀಸರು ಈಗ ಸರ್ವೋನ್ನತ ನ್ಯಾಯಾಲಯದ ಆದೇಶವನ್ನು ಪಾಲಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಲೈಸನ್ಸ್ ಪಡೆಯದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಮನರಂಜನೆ ಆದೇಶ ಪಾಲನೆ ಅಧಿನಿಯಮ, 2005ರ ನಿಯಮಗಳನ್ನು ಪಾಲಿಸದ ಬಾರ್, ಪಬ್ ಮತ್ತು ರೆಸ್ಟೋರೆಂಟ್‍ಗಳಿಗೆ ಪೆÇಲೀಸರು ಈಗಾಗಲೇ ನೋಟಿಸ್‍ಗಳನ್ನು ನೀಡಿದ್ದಾರೆ.

ಕಾನೂನಿನ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಮನರಂಜನೆಗಾಗಿ ವಾದ್ಯಗೋಷ್ಠಿ/ಸಂಗೀತಗೋಷ್ಠಿ ಅಥವಾ ನೇರ ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಇಲ್ಲವೇ ಧ್ವನಿಮುದ್ರಿತ ಮ್ಯೂಸಿಕ್ ಪ್ರಸಾರ ಮಾಡಲು ಪರವಾನಗಿ ಪಡೆಯುವುದು ಕಡ್ಡಾಯ. ಇಂಥ ಲೈಸನ್ಸ್‍ಗಳನ್ನು ಪಡೆಯಲು ಇವುಗಳ ಮಾಲೀಕರು ಒಟ್ಟು ಏಳು ದಾಖಲೆಪತ್ರಗಳನ್ನು ಸಲ್ಲಿಸಬೇಕಿದೆ. ಅಧಿಭೋಗ ಪ್ರಮಾಣಪತ್ರ (ಆಕ್ಯುಪೆನ್ಸಿ ಸರ್ಟಿಫಿಕೇಟ್_ಒಸಿ), ನಗರ ಪ್ರಾಧಿಕಾರದಿಂದ ಅಂಗೀಕೃತ ಕಟ್ಟಡ ನಕ್ಷೆ, ಪಾಲುದಾರಿಕೆ ಒಪ್ಪಂದ ಪತ್ರ, ಗುತ್ತಿಗೆ ಅಥವಾ ಹಕ್ಕು ಪತ್ರ ಹಾಗೂ ಅಗ್ನಿ ಸುರಕ್ಷತಾ ಪಾಲನೆ, ತುರ್ತು ಸೇವೆಗಳ ಇಲಾಖೆಗಳಿಂದ ನಿರಾಕ್ಷೇಪಣೆ ಪ್ರಮಾಣಪತ್ರಗಳನ್ನು ನೀಡಿದರಷ್ಟೇ ಬಾರ್ ಮತ್ತು ಪಬ್ ಮಾಲೀಕರಿಗೆ ಲೈಸನ್ಸ್ ಲಭ್ಯವಾಗುತ್ತದೆ.
ನಿಗದಿತ ಸಮಯದೊಳಗೆ ಈ ದಾಖಲೆಪತ್ರಗಳನ್ನು ಹಾಜರುಪಡಿಸಿದರೆ ಮಾತ್ರ ಪಬ್ ಮತ್ತು ಬಾರ್ ಮಾಲೀಕರಿಗೆ ಪರವಾನಗಿ ಲಭಿಸುತ್ತದೆ. ಇಲ್ಲದಿದ್ದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

ಹಿಂದಿನ ಪೆÇಲೀಸ್ ಆಯುಕ್ತರು 2005ರಲ್ಲಿ ಈ ಸಂಬಂಧ ಪಬ್‍ಗಳು, ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳಿಗೆ ನೋಟಿಸ್‍ಗಳನ್ನು ಜಾರಿಗೊಳಿಸಿ, ಲೈವ್ ಮ್ಯೂಸಿಕ್‍ಗಳನ್ನು ಪ್ಲೇ ಮಾಡಬೇಕಾದರೆ ಲೈಸನ್ಸ್ ಕಡ್ಡಾಯ. ಸಾರ್ವಜನಿಕರಿಗೆ ಕಿರಿಕಿರಿ ಮತ್ತು ಉಪದ್ರವ ತಪ್ಪಿಸಲು ಈ ಕ್ರಮ ಅನಿವಾರ್ಯ ಎಂದು ತಿಳಿಸಿದ್ದರು.
ಪೆÇಲೀಸ್ ಇಲಾಖೆಯ ಈ ಸೂಚನೆ ವಿರುದ್ಧ ಪಬ್ ಮತ್ತು ರೆಸ್ಟೋರೆಂಟ್‍ಗಳ ಮಾಲೀಕರು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ದೀರ್ಘ ಕಾಲದ ವಿಚಾರಣೆ ಬಳಿಕ ಸರ್ವೋಚ್ಚ ನ್ಯಾಯಾಲಯ ಈಗ ಪೆÇಲೀಸರ ಪರವಾಗಿ ತೀರ್ಪು ನೀಡಿದೆ.

ಕಡ್ಡಾಯವಾಗಿ ಈ ಏಳು ದಾಖಲೆ ಪತ್ರಗಳನ್ನು ಸಲ್ಲಿಸಿ ಲೈಸನ್ಸ್ ಪಡೆಯುವುದು ಕಡ್ಡಾಯ ಎಂದು ನಗರ ಪೆÇಲೀಸರು ತಿಳಿಸಿರುವುದರಿಂದ ಈ ನಿಯಮಗಳನ್ನು ಪಾಲಿಸದ ಅಥವಾ ದಾಖಲೆ ಪತ್ರಗಳನ್ನು ಹೊಂದಿರದ ಬಾರ್‍ಗಳು ಬಂದ್ ಆಗುವ ಸಾಧ್ಯತೆ ಇದೆ.
ಎಷ್ಟು ಬಾರ್ ಮತ್ತು ಪಬ್‍ಗಳ ಮಾಲೀಕರು ಈ ಏಳು ದಾಖಲೆಪತ್ರಗಳನ್ನು ಸಮರ್ಪಕವಾಗಿ ಹೊಂದಿರುತ್ತಾರೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಈ ದಾಖಲೆಗಳನ್ನು ಸಲ್ಲಿಸದವರಿಗೆ ಲೈಸನ್ಸ್ ಅಲಭ್ಯವಾಗಿ ಬಾರ್‍ಗಳು ಮತ್ತು ಪಬ್‍ಗಳು ಮುಚ್ಚುತ್ತದೆ ಎಂದು ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ