ನವದೆಹಲಿ:ಆ-೪:ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊಠಡಿಗೆ ವ್ಯಕ್ತಿಯೊಬ್ಬ ಚಾಕು ಹಾಗೂ ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ನುಗ್ಗಲು ಯತ್ನಿಸಿದ ಘಟನೆ ನಡೆದಿದೆ.
ದೆಹಲಿ ಹೌಸ್ ನಲ್ಲಿ ಸಿಎಂ ಪಿಅರಾಯಿ ವಿಜಯನ್ ಬೆಳಗ್ಗೆ 9.45ರ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು, ಈ ವೇಳೆ ವಿಮಲ್ ಕುಮಾರ್ ಎಂಬಾತ ಧ್ವಜ ಹಾಗೂ ಚಾಕು ಹಿಡಿದು ಕೊಠಡಿಗೆ ನುಗ್ಗಲು ಯತ್ನಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದುಕೊಂಡು ಚಾಕು ಕಸಿದುಕೊಂಡಿದ್ದಾರೆ.
ಆತ ಸಿಎಂ ಮುಂದೆ ಆತ್ಮಹತ್ಯೆ ಯತ್ನ ಮಾಡಲು ಬಂದಿರಬಹುದು ಎಂದು ಶಂಕಿಸಲಾಗಿದೆ. ಕಳೆದ ವರ್ಷ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಆರ್ ಎಸ್ ಎಸ್ ನಾಯಕರೊಬ್ಬರಿಂದ ಜೀವ ಬೆದರಿಕೆ ಬಂದಿತ್ತು, ಪಿಣರಾಯಾ ತಲೆ ಕತ್ತರಿಸುವವರಿಗೆ 1 ಕೋಟಿ ರೂ ಇನಾಮು ಕೊಡುವುದಾಗಿ ಘೋಷಿಸಿದ್ದರು.
Man Carrying Knife, National Flag Tries To Enter Kerala Bhawan In Delhi