ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನ ಭೇಟಿಯಾಗಲು ಕಾದಿದ್ದ ವಿವಾದಿತ ಉದ್ಯಮಿ ವಿಜಯ್ ಮಲ್ಯ ಅವರ ಮನವಿಯನ್ನ ಕೇಂದ್ರ ಸರ್ಕಾರ ನಿರಾಕರಿಸಿದೆ.
ಬ್ಯಾಂಕ್ಗಳಿಗೆ ವಂಚನೆ ಆರೋಪ ಸಂಬಂಧ ಮೊನ್ನೆ ಲಂಡನ್ ನ್ಯಾಯಾಲಯ ಮುಂಬೈನ ಆರ್ಥರ್ ರಸ್ತೆಯಲ್ಲಿರುವ ಜೈಲಿನ ಚಿತ್ರಗಳನ್ನ ಕಳುಹಿಸುವಂತೆ ಭಾರತ ಸರ್ಕಾರವನ್ನ ಕೇಳಿತ್ತು. ಇದೇ ಸಂದರ್ಭದಲ್ಲಿ ವಿಜಯ್ ಮಲ್ಯ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭೇಟಿಗೂ ಮನವಿಯನ್ನ ಮುಂದಿಟ್ಟಿದ್ದರು. ಈ ಬೇಡಿಕೆಯನ್ನ ಇದೀಗ ಕೆಂದ್ರ ಸರ್ಕಾರ ತಿರಸ್ಕರಿಸಿದೆ.
ಐಪಿಎಲ್ನಲ್ಲಿ ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ನಾಯಕನಾಗಿ ತಂಡವನ್ನ ಮುನ್ನಡೆಸುತ್ತಿದ್ದಾರೆ. 2016ರಲ್ಲಿ ವಿಜಯ್ ಮಲ್ಯ ಆರ್ಸಿಬಿ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ರು. ಆರ್ಸಿಬಿ ಫ್ರಾಂಚೈಸಿಯಲ್ಲಿ ವಿಜಯ್ ಮಲ್ಯ ಯುನೈಟೆಡ್ ಸ್ಪಿರಿಟ್ಸ್ ಶೇರ್ಗಳನ್ನ ಐಪಿಎಲ್ನಲ್ಲಿ ಬಳಸಿದ್ರು.