ಕೊಹ್ಲಿ ಪಡೆಗೆ ಗೆಲ್ಲಲು ಬೇಕು 84 ರನ್

ಬರ್ಮಿಂಗ್ಯಾಮ್ : ಟೀಂ ಇಂಡಿಯಾ ಮತ್ತು ಆಂಗ್ಲರ ನಡುವಿನ ಬರ್ಮಿಂಗ್ಯಾಮ್ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಆಂಗ್ಲರ ವಿರುದ್ಧ ಟೀಂ ಇಂಡಿಯಾಕ್ಕೆ ಗೆಲ್ಲಲು ಇನ್ನು 84 ರನ್ಗಳು ಬೇಕಾಗಿದೆ.
ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಸೊಗಸಾದ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಪಾತ್ಪಬಂಧವರಾಗಿದ್ದಾರೆ. ಎರಡನೆ ಇನ್ನಿಂಗ್ಸ್ನಲ್ಲೂ ಬ್ಯಾಟಿಂಗ್ ವೈಫಲ್ಯ ಮುಂದುವರೆಸಿದ ಟೀಂ ಇಂಡಿಯಾ ಬ್ಯಾಟ್ಸ್ ಮನ್ಗಳು ಒಬ್ಬರ ಹಿಂದೆ ಒಬ್ಬರು ಪೆವಲಿಯನ್ ಪರೇಡ್ ನಡೆಸಿದ್ರು. ಆರಂಭಿಕ ಬ್ಯಾಟ್ಸ್ ಮನ್ ಗಳಾದ ಮುರಳಿ ವಿಜಯ್(6) ಶಿಖರ್ ಧವನ್ ( 13), ಕೆ.ಎಲ್. ರಾಹುಲ್ (13) , ಅಜಿಂಕ್ಯ ರಹಾನೆ ( 2), ಆರ್.ಅಶ್ವಿನ್ ( 13) ಬೇಗನೆ ಪೆವಿಲಿಯನ್ ಸೇರಿದ್ರು. ಆದ್ರೆ ಒಂದು ಜೀವದಾನ ಪಡೆದು ಕ್ರಿಸ್ಗೆ ನೆಲಕಚ್ಚಿ ನಿಂತ ನಾಯಕ ಕೊಹ್ಲಿ ಆಂಗ್ಲರ ಎಲ್ಲರ ತಂತ್ರಗಳನ್ನ ವಿಫಲಗೊಳಿಸಿದ್ರು. ತಂಡದ ಅನುಭವಿ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ರಿಮದಲು ಉತ್ತಮ ಸಾಥ್ ಸಿಕ್ಕಿತ್ತು. ದಿನದ ಅಂತ್ಯಕ್ಕೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು. ವಿರಾಟ್ ಕೊಹ್ಲಿ ಅಜೇಯ 43, ದಿನೇಶ್ ಕಾರ್ತಿಕ್ ಅಜೇಯ 18 ರನ್ ಗಳಿಸಿದ್ರು. ಟೀಂ ಇಂಡಿಯಾ ಗೆಲ್ಲಬೇಕಿದ್ದಲ್ಲಿ ವಿರಾಟ್ ಕೊಹ್ಲಿ ಕೊನೆಯವರೆಗೂ ನಿಂತು ಬ್ಯಾಟಿಂಗ್ ಮಾಡಬೇಕಿದೆ.
ಇದಕ್ಕೂ ಮುನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ವೇಗಿ ಇಶಾಂತ್ ದಾಳಿಗೆ ತತ್ತರಿಸಿ ಹೋಯಿತು. ಕೆಳಕ್ರಮಾಂಕದಲ್ಲಿ ಆಲ್ರೌಂಡರ್ ಸ್ಯಾಮ್ ಕರನ್ ಅರ್ಧ ಶತಕ ಬಾರಿಸಿ ತಂಡದ ಸ್ಕೋರ್ ಹೆಚ್ಚಿಸಿದ್ರು. ಬೆನ್ ಸ್ಟೋಕ್ಸ್ 6, ಜಾನಿ ಬೈರ್ಸ್ಟೋ 28, ಜೋಸ್ ಬಟ್ಲರ್ 1, ಆದಿಲ್ ರಶೀದ್ 16, ಸ್ಟುವರ್ಟ್ ಬ್ರಾಡ್ 11 ರನ್ ಗಳಿಸಿದ್ರು. ಕೊನೆಯಲ್ಲಿ ಇಂಗ್ಲೆಂಡ್ 180 ರನ್ಗಳಿಗೆ ಆಲೌಟ್ ಆಯಿತು. ಕೊಹ್ಲಿ ಪಡೆಗೆ ಒಟ್ಟು 194 ರನ್ಗಳ ಟಾರ್ಗೆಟ್ ನೀಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ