ಬೆಂಗಳೂರು, ಆ.3- ಪರಿಣಿತ ವೈದ್ಯರು ಮತ್ತು ರೋಗಿಗಳ ನಡುವೆ ಕೇವಲ 30 ನಿಮಿಷಗಳ ಅವಧಿಯಲ್ಲಿ ಆನ್‍ಲೈನ್‍ಸಲಹೆಗಾಗಿ ಚಾಟ್ ಮಾಡಲು ಅಥವಾ ಕರೆ ಮಾಡಲು ಸಂಪರ್ಕ ಒದಗಿಸುವ ಡಾಕ್ಸ್ ಆ್ಯಪ್ ಈಗ ತನ್ನ ಆರೋಗ್ಯ ಸೇವೆಗಳನ್ನು ಆರಂಭಿಸಿದೆ.
ಮೊಬೈಲï ಅಪ್ಲಿಕೇಷನ್‍ಗಳನ್ನು ಬಳಸುವ ಅಭ್ಯಾಸವಿಲ್ಲದಿರುವವರಿಗೆ ವೆಬ್ ಆಧಾರಿತ ಸೇವೆಗಳನ್ನು ಡಾಕ್ಸ್ ಆ್ಯಪ್ ಒದಗಿಸಿದೆ. ಭಾರತದ ಮೂರು ಮತ್ತು ನಾಲ್ಕನೇ ದರ್ಜೆಯ ನಗರಗಳಲ್ಲಿರುವ ರೋಗಿಗಳಿಗೆ ತನ್ನ ಸೇವೆಗಳನ್ನು ದೊರಕಿಸಲು ಡಾಕ್ಸ್ ಆ್ಯಪ್ ಮುಂದಾಗಿದೆ. ಮೊಬೈಲ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಳ್ಳದೆಯೇ ಡಾಕ್ಸ್ ಆ್ಯಪ್‍ನ ಸೇವೆಗಳನ್ನು ಪಡೆದುಕೊಳ್ಳುವ ಸೌಲಭ್ಯ ದೊರಕಲಿದೆ.
ವೈದ್ಯರೊಡನೆ ಯಾವುದೇ ಅಡೆತಡೆ ಇಲ್ಲದೆ ಸಮಾಲೋಚಿಸುವ ಅವಕಾಶವನ್ನು ಕಲ್ಪಿಸುವ ಈ ಮೊಬೈಲ್ ಆಧಾರಿತ ಫ್ಲಾಟ್‍ಫಾರ್ಮ್, ಈಗ ಸುಲಭವಾಗಿ ಬಳಸಬಹುದಾದ ವೆಬ್ ಸೇವೆಗಳನ್ನು ಒದಗಿಸುವ ಮೂಲಕ ಮೊಬೈಲï ಅಪ್ಲಿಕೇಷನ್ ಡೌನ್‍ಲೋಡ್ ಮಾಡುವ ಅಗತ್ಯವನ್ನು ನಿವಾರಿಸಿದೆ. ದೇಶದ ಪ್ರಸಿದ್ಧ ವೈದ್ಯರನ್ನು ಡಾಕ್ಸ್‍ಆ್ಯಪ್‍ನ ವೆಬ್ ಫ್ಲಾಟ್‍ಫಾರ್ಮ್ ಮೂಲಕ ಸುಲಭವಾಗಿ ಸಂಪರ್ಕಿಸಬಹುದಾಗಿದೆ.