ಭಾರತೀಯ ಪ್ರಜೆ ಸೇರಿ ಮೂವರನ್ನು ಹತ್ಯೆಗೈದ ಉಗ್ರರು

ಕಾಬೂಲ್‌:ಆ-೨: ಅಪ್ಘಾನಿಸ್ತಾನದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ಉಗ್ರರು ಭಾರತೀಯ ಪ್ರಜೆ ಸೇರಿ ಮೂವರು ವಿದೇಶಿಯರನ್ನು ಒತ್ತೆಯಾಳಾಗಿ ಇರಿಸಿಕೊಂಡು ಬಳಿಕ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅಂತರರಾಷ್ಟ್ರೀಯ ಆಹಾರ ತಯಾರಿಕೆ ಕಂಪೆನಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಪ್ರಜೆಗಳು ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಆಪ್ಘಾನ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರನ್ನು ಓರ್ವ ಭಾರತೀಯ, ಒಬ್ಬ ಮೆಕ್ಸಿಕೊ, ಮತ್ತೊಬ್ಬರು ಮಲೇಶಿಯಾ ಪ್ರಜೆಗಳೆಂದುಕಾಬೂಲ್ ಪೊಲೀಸ್ ವಕ್ತಾರ ಹಷ್‌ಮತ್‌ ತಿಳಿಸಿದ್ದಾರೆ. ಮೃತರ ಗುರುತು ಪತ್ತೆಯಾದ ಬಳಿಕ ಅವರ ಪಾರ್ಥೀವ ಶರೀರಗಳನ್ನು ಅವರ ದೇಶಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ.

Afghanistan Terrorists kidnapped and killed three foreign nationals

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ