ಬೆಂಗಳೂರು,ಜು.29- ಸಂಘಟನೆಗಳು ನಡೆಸುವ ದೊಡ್ಡ ದೊಡ್ಡ ಹೋರಾಟಕ್ಕೂ ಜಗ್ಗದ ಸರ್ಕಾರಗಳು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರಿಗೆ ಹೆದರುತ್ತವೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ನಗರದ ಗಾಂಧಿನಭವನದಲ್ಲಿ ಎಚ್.ಎಸ್.ದೊರೆಸ್ವಾಮಿ ಅವರ 100ರ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೊರೆಸ್ವಾಮಿ ಅವರು ಗಾಂಧಿ ಮಾರ್ಗವನ್ನೇ ಅನುಸರಿಸಿದವರು. ಇಂಥವರ ವ್ಯಕ್ತಿತ್ವ , ಗಾಂಧೀಜಿಯವರ ಸೇವೆ , ಜೀವನ ಇಂದಿನ ಯುವಕರಿಗೆ ತಿಳಿಸಿದರೆ ನಂಬದ ಸ್ಥಿತಿಯಲ್ಲಿದ್ದಾರೆ. ಇನ್ನು 10 ವರ್ಷಗಳ ನಂತರ ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆ ಇಂತಹ ವೇದಿಕೆಗಳೇ ಸಿಗುವುದಿಲ್ಲ ಎಂದು ವಿಷಾದಿಸಿದರು.
ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದೊರೆಸ್ವಾಮಿ ಅವರ ವ್ಯಕ್ತಿತ್ವ ಮತ್ತು ಆದರ್ಶದ ಬಗ್ಗೆ ಮಕ್ಕಳಿಗೆ ತಿಳಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ಸ್ಮಾರಕನಿಧಿ ಅಧ್ಯಕ್ಷ ಡಾ.ವೂಡೆ ಪಿ. ಕೃಷ್ಣ ಮಾತನಾಡಿ, ದೊರೆಸ್ವಾಮಿ ಅವರು ಸ್ವತಂತ್ರಹೋರಾಟಕ್ಕೆ ಸಾಕ್ಷಿಯಾಗಿದ್ದಾರೆ. ಇವರು ನಿರಂತರ ಚಳುವಳಿಗಾರರು. ಇವರ ಬದುಕು ಹಾಗೂ ಜೀವನ ಮೌಲ್ಯ ಯುವಕರಿಗೆ ಪ್ರೇರಣೆ ಎಂದು ಅಭಿಪ್ರಾಯಪಟ್ಟರು.
ಇವರನ್ನು ಗಾಂಧೀಜಿಯವರ ಅನುಯಾಯಿ ಎಂದು ಕರೆಯಬಹುದು. ಶಿಕ್ಷಣ ಪ್ರೇಮಿ, ಪತ್ರಕರ್ತರು, ಹೋರಾಟಗಾರರು ಆಗಿರುವ ಅವರಿಗೆ ನಾನಾ ಮುಖಗಳಿವೆ. ರಾಜಕೀಯದಿಂದ ದೂರ ಇರುವ ಇವರು ಜನಗಳ ಮಧ್ಯೆ ಇದ್ದಾರೆ. ದೊರೆಸ್ವಾಮಿ ಅವರದು ನೋವು-ನಲಿವಿಗೆ ಸ್ಪಂದಿಸುವ ವ್ಯಕ್ತಿತ್ವ ಎಂದರು.
ಸರಳ ಜೀವನವನ್ನು ಸಾಧಿಸಿದ ಅವರು ಧೈರ್ಯ, ಪ್ರೀತಿ, ಸತ್ಯ, ಅಹಿಂಸೆಯನ್ನು ಯಾರು ಪ್ರತಿಪಾದಿಸುತ್ತಾರೋ ಅಂಥವರು ಇವರ ತತ್ವಗಳನ್ನು ಪಾಲಿಸುವುದಕ್ಕೆ ಸಾಧ್ಯ. ಗಾಂಧಿ ತತ್ವವನ್ನು ಯುವಕರಲ್ಲಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಹೋರಾಟಗಾರ ದೊರೆಸ್ವಾಮಿ ದಂಪತಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು ಹಾಗೂ ದೊರೆಸ್ವಾಮಿ ಅವರ ಕುರಿತು ಬಿ.ಆರ್.ರಮೇಶ್ ರಚಿಸಿರುವ ಗಾಳಿಗೆ ಸಿಕ್ಕ ತರಗೆಲೆ ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪೆÇ್ರ.ಎಸ್.ಜಿ.ಸಿದ್ದರಾಮಯ್ಯ, ಕೇಂದ್ರ ಮಾಜಿ ಸಚಿವರಾದ ಸಿ.ಕೆ.ಜಾಫರ್ ಷರೀಫ್, ಎಂ.ವಿ.ರಾಜಶೇಖರನ್ ಮತ್ತಿತರರು ಇದ್ದರು.
Freedom Fighter HS Doreswami,celebration,100 years birth anniversary,Gandhi Bhavan