ಫೈಜಾಬಾದ್:ಜು-೨೭: ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿರುವುದೇ ಅತ್ಯಾಚಾರದಂತಹ ಅಪರಾಧ ಕೃತ್ಯಗಳು ಹೆಚ್ಚಲು ಕಾರಣ ಎನ್ನುವುದರ ಮೂಲಕ ಉತ್ತರ ಪ್ರದೇಶದ ಸಂಸದ ಹರಿ ಓಂ ಪಾಂಡೆ ಹೊಸವಿವಾದದ ಕಿಡಿ ಹಚ್ಚಿದ್ದಾರೆ.
ದೇಶದಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಏರುತ್ತಿರುವುದರಿಂದಲೇ ಭಯೋತ್ಪಾದನೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಸ್ವಾತಂತ್ರ್ಯದ ಬಳಿಕ ಮುಸ್ಲಿಮರ ಜನಸಂಖ್ಯೆ ಶೇಕಡಾವಾರು ಏರುತ್ತಲೇ ಇದೆ, ಎಂದವರು ಹೇಳಿದ್ದಾರೆ.
ಮುಸ್ಲಿಮರು 3-4 ಸಲ ಮದುವೆಯಾಗುತ್ತಾರೆ ಮತ್ತು 9-10 ಮಕ್ಕಳನ್ನು ಹಡೆಯುತ್ತಾರೆ. ಅವರು ಶಿಕ್ಷಣವನ್ನು ಪಡೆಯದೇ ನಿರುದ್ಯೋಗಿಗಳಾಗುತ್ತಾರೆ. ಇದು ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಅವರ ಜನಸಂಖ್ಯೆ ತ್ವರಿತಗತಿಯಲ್ಲಿ ಹೆಚ್ಚುತ್ತಿದೆ. ಈಗ ಅವರು ಶರಿಯಾಕ್ಕಾಗಿ ಒತ್ತಾಯಿಸುತ್ತಿದ್ದಾರೆ, ಸ್ವಲ್ಪ ಕಾಲದ ಬಳಿಕ ಪಾಕಿಸ್ತಾನಕ್ಕಾಗಿ ( ಹೊಸ ದೇಶ ) ಒತ್ತಾಯಿಸಲಿದ್ದಾರೆ ಎಂದು ಪಾಂಡೆ, ಹೇಳಿದ್ದಾರೆ.
ಕೇಂದ್ರ ಸರಕಾರ ಮುಸ್ಲಿಂ ಜನಸಂಖ್ಯೆಯನ್ನು ನಿಗ್ರಹಿಸದಿದ್ದರೆ ದೇಶದೊಳಗಿಂದ ಪಾಕಿಸ್ತಾನದಂತಹ ಹೊಸ ರಾಷ್ಟ್ರ ಹುಟ್ಟಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಎಲ್ಲರಿಗೂ ಅನ್ವಯಿಸುವಂತೆ ಜನಸಂಖ್ಯೆ ನಿಯಂತ್ರಣ ಮಸೂದೆಯನ್ನು ಸಂಸತ್ತಿನಲ್ಲಿ ಜಾರಿಗೊಳಿಸುವುದು ಅತ್ಯವಶ್ಯಕ ಎಂದು ಪ್ರತಿಪಾದಿಸಿದ್ದಾರೆ.
Rapes, Murders On Rise Due To Increasing Muslim Population: BJP Lawmaker