ಲಖನೌ: ಅಮೆರಿಕದ ವ್ಯಾಪಾರ ಕ್ಷೇತ್ರದ ದೈತ್ಯ ಸಂಸ್ಥೆ ವಾಲ್ಮಾರ್ಟ್ ಭಾರತದಲ್ಲಿ ಇನ್ನು 3 ವರ್ಷಗಳಲ್ಲಿ 20 ಸಗಟು ಕ್ಯಾಶ್ ಆ್ಯಂಡ್ ಕ್ಯಾರಿ ಮಳಿಗೆಗಳನ್ನು ಪ್ರಾರಂಭಿಸಲಿವೆ.
ಭಾರತದಲ್ಲಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಕ್ಷೇತ್ರದ ಗ್ರಾಹಕರನ್ನು ತನ್ನತ್ತ ಸೆಳೆಯುವುದಕ್ಕಾಗಿ ವಾಲ್ಮಾರ್ಟ್ ಇಂಡಿಯಾ ಈಗಾಗಲೇ ತನ್ನ ಎರಡನೇ ಪೂರೈಕಾ ಕೇಂದ್ರ( ಫುಲ್ಫಿಲ್ಮೆಂಟ್ ಸೆಂಟರ್) ವನ್ನು ಪ್ರಾರಂಭಿಸಿದ್ದು, ಆನ್ ಲೈನ್ ಬ್ಯುಸಿನೆಸ್-ಬ್ಯುಸಿನೆಸ್ (B2B) ಗ್ರಾಹಕರನ್ನು ಸೆಳೆಯುವ ಕಾರ್ಯದಲ್ಲಿ ತೊಡಗಿದೆ.
ಭಾರತದಲ್ಲಿ 20 ಕ್ಯಾಶ್ ಆ್ಯಂಡ್ ಕ್ಯಾರಿ ಮಳಿಗೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಾಲ್ಮಾರ್ಟ್ ಇಂಡಿಯಾ ಅಧ್ಯಕ್ಷ ಹಾಗೂ ಸಿಇಒ ಕ್ರಿಷ್ ಅಯ್ಯರ್ ಈ ವರ್ಷ 2 ಮಳಿಗೆಗಳು, ಮುಂದಿನ ವರ್ಷ 8 ಮಳಿಗೆಗಳು ಹಾಗೂ ಆ ನಂತರ 10 ಮಳಿಗೆಗಳನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ.
ಈಗಾಗಲೇ ಲಖನೌದಲ್ಲಿ ಪೂರೈಕೆ ಮಾಡುವ ಕೇಂದ್ರವನ್ನು ವಾಲ್ಮಾರ್ಟ್ ಸ್ಥಾಪಿಸಿದ್ದು, ಭಾರತದ ಇತರ ರಾಜ್ಯಗಳಲ್ಲಿಯೂ ಪೂರೈಕಾ ಕೇಂದ್ರಗಳನ್ನು ಸ್ಥಾಪಿಸಲಿವೆ ಎಂದು ಕ್ರಿಶ್ ಅಯ್ಯ್ಯರ್ ಹೇಳಿದ್ದಾರೆ.