ಮುಂಬೈ: ಒಂದು ಹೊತ್ತಿನ ಊಟಕ್ಕೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಲಕ್ಷ ರು. ಬಿಲ್ ಕಟ್ಟಿ ಸುದ್ದಿಯಾಗಿದ್ದಾರೆ.
ಕ್ರಿಕೆಟ್ ನಿವೃತ್ತಿ ಬಳಿಕ ಹಿಂದಿ ಕಾಮೆಂಟರಿ ಮೂಲಕವೇ ಕ್ರಿಕೆಟ್ ಪ್ರಿಯರಿಗೆ ಪರಿಚಿತರಾಗಿರುವ ಆಕಾಶ್ ಚೋಪ್ರಾ ಅವರು ಇಂಡೋನೇಷ್ಯಾದಲ್ಲಿ ಒಂದು ಊಟಕ್ಕೆ ಬರೋಬ್ಬರಿ ಏಳು ಲಕ್ಷ ಬಿಲ್ ಕಟ್ಟಿದ್ದಾರೆ.
ಏಳು ಲಕ್ಷದ ಬಿಲ್ಲಿನ ಫೋಟೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ವೆಲ್ ಕಮ್ ಟು ಇಂಡೋನೇಷ್ಯಾ ಎಂದು ಬರೆದುಕೊಂಡಿದ್ದಾರೆ.
ಆಕಾಶ್ ಚೋಪ್ರಾ ಪಾವತಿಸಿದ ಬಿಲ್ ಇಂಡೋನೇಷ್ಯಾದ ಕರೆನ್ಸಿಯಲ್ಲಿದ್ದು ಇದು ಭಾರತೀಯ ರೂಪಾಯಿಗೆ ಪರಿವರ್ತಿಸಿದಾಗ ಅದರ ಮೊತ್ತ ಸುಮಾರು 3,334 ರುಪಾಯಿ ಮಾತ್ರ ಆಗುತ್ತದೆ.
ಆಕಾಶ್ ಚೋಪ್ರಾ ಅವರ ಟ್ವೀಟ್ ಇದೀಗ ಹಾಸ್ಯದ ವಿಷಯವಾಗಿ ಮಾರ್ಪಟಿದ್ದು ಇನ್ನು ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ.