ರಾಯ್‍ಪುರ, ಜು.19- ಛತ್ತೀಸ್‍ಗಢದ ಬಂಡು ಕೋರರ ಹಾವಳಿ ಪೀಡಿತ ಬಿಜಾಪುರ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳ ಜೊತೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ನಾಲ್ವರು ಮಹಿಳೆಯರೂ ಸೇರಿದಂತೆ ಎಂಟು ನಕ್ಸಲರು ಹತರಾಗಿದ್ದಾರೆ. ಮೃತ ಮಾವೋವಾದಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳನ್ನು ಯೋಧರು ವಶಪಡಿಸಿಕೊಂಡಿದ್ದಾರೆ.
ಛತ್ತೀಸ್‍ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದೆ. ಬಿಜಾಪುರ್ ಮತ್ತು ದಂತೇವಾಡ ಜಿಲ್ಲೆಗಳ ಗಡಿ ಭಾಗದ ತಿಮಿನರ್ ಮತ್ತು ಪುಸ್‍ನೆರ್ ಗ್ರಾಮಗಳ ಬಳಿ ದಟ್ಟ ಅರಣ್ಯದಲ್ಲಿ ಇಂದು ಬೆಳಗ್ಗೆ 6 ಗಂಟೆಯಲ್ಲಿ ಈ ಎನ್‍ಕೌಂಟರ್ ನಡೆಯಿತು.
ಗುಂಡಿನ ಕಾಳಗದಲ್ಲಿ ಒಟ್ಟು ಏಳು ನಕ್ಸಲರು ಹತರಾಗಿದ್ದಾರೆ. ಇವರಲ್ಲಿ ನಾಲ್ವರು ಮಹಿಳೆಯರೂ ಇದ್ದಾರೆ ಎಂದು ರಾಜ್ಯ ಉಪ ಮಹಾ ಪೆÇಲೀಸ್ ನಿರೀಕ್ಷಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಪಿ. ಸುಂದರ್‍ರಾಜ್ ತಿಳಿಸಿದ್ದಾರೆ. ಜಿಲ್ಲಾ ಮೀಸಲು ಪಡೆ (ಡಿಆರ್‍ಜಿ) ಮತ್ತು ವಿಶೇಷ ಕಾರ್ಯ ಪಡೆ(ಎಸ್‍ಟಿಎಫ್) ಜಂಟಿ ತಂಡ ತಿಮಿನರ್ ಮತ್ತು ಪುಸ್‍ನೆರ್ ಗ್ರಾಮಗಳ ಕಾನನದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಆಗ ಮಾವೋವಾದಿಗಳು ಯೋಧರತ್ತ ಗುಂಡು ಹಾರಿಸಿದಾಗ ಭೀಕರ ಗುಂಡಿನ ಚಕಮಕಿ ನಡೆಯಿತು. ಗುಂಡಿನ ಮೊರೆತ ನಿಂತ ನಂತರ ಸ್ಥಳವನ್ನು ಪರಿಶೀಲಿಸಿದಾಗ ಮೂವರು ಮಹಿಳೆಯರೂ ಸೇರಿದಂತೆ ಏಳು ನಕ್ಸಲರು ಹತರಾಗಿದರು. ಎನ್‍ಕೌಂಟರ್ ನಡೆದ ಸ್ಥಳದಿಂದ ಎರಡು ಇನ್ಸಾಸ್ ರೈಫಲ್‍ಗಳು, ಎರಡು .303 ರೈಫಲ್‍ಗಳು, ಒಂದು 12 ಬೋರ್ ಗನ್ ಮತ್ತು ಕೆಲವು ಮಜಲ್ ಲೋಡಿಂಗ್ ರೈಫಲ್‍ಗಳು ಹಾಗೂ ಬುಲೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಪರಾರಿಯಾಗಿರುವ ನಕ್ಸಲರಿಗಾಗಿ ಈ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರೆದಿದೆ. ಈ ಸ್ಥಳವು ಛತ್ತೀಸ್‍ಗಢ ರಾಜಧಾನಿ ರಾಯ್‍ಪುರ್‍ನಿಂದ 450 ಕಿ.ಮೀ.ದೂರದಲ್ಲಿದೆ. ಛತ್ತೀಸ್‍ಗಢದ ರಾಜ್‍ನಂದ್‍ಗಾಂವ್‍ನಲ್ಲಿ ಭದ್ರತಾ ಪಡೆಗಳೊಂದಿಗೆ ಮೊನ್ನೆ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳಾ ನಕ್ಸಲ್ ಬಲಿಯಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. ಹಲವಾರು ಗಂಭೀರ ಅಪರಾಧ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈಕೆಯ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ರಾಜ್‍ನಂದ್‍ಗಾಂವ್‍ನ ಕೊಂಡಲ್ ಪರ್ವತದ ಬಳಿ ಅರಣ್ಯ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಮಾವೋವಾದಿಗಳ ಔಂಧಿ-ಮೊಹ್ಲಾ ಜಂಟಿ ಪ್ರದೇಶ ಸಮಿತಿಯ ಸದಸ್ಯ ಜರೀನಾಳನ್ನು ಯೋಧರು ಹೊಡೆದುರುಳಿಸಿದ್ದರು. ಸ್ಥಳದಿಂದ ಬಂದೂಕು, ಮದ್ದುಗುಂಡು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜರೀನಾ ವಿರುದ್ಧ ಹಲವು ಪೆÇಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಈಕೆಯ ತಲೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.