ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು 911 ಅಂಕಗಳನ್ನ ಪಡೆದು ಐಸಿಸಿ ಏಕದಿನ ರ್ಯಾಂಕಿಂಗ್‍ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಟಾಪ್ 10ರಲ್ಲಿ ಸ್ಥಾನ ಪಡೆದು ಮಿಂಚಿದ್ದರೆ.
ಮೊನ್ನೆ ಮುಕ್ತಯವಾದ ಆಂಗ್ಲರ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳಿಂದ 75, 45 ಮತ್ತು 71 ರನ್ ಗಳಿಸಿ ಕೇವಲ ಎರಡು ಅಂಕಗಳನ್ನ ಸಂಪಾದಿಸಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.
1991ರಲ್ಲಿ ಆಸ್ಟ್ರೇಲಿಯಾದ ಡೀನ್ ಜನ್ಸ್ 918 ಅಂಕಗಳನ್ನ ಪಡೆದಿದ್ದು ಇಂದಿಗೂ ದಾಖಲೆಯಾಗಿ ಉಳಿದಿದೆ.
ಇನ್ನು ಚೈನಾಮನ್ ಸ್ಪಿನ್ನರ್ ಕುಲ್‍ದೀಪ್ ಯಾದವ್ ಆತಿಥೇಯ ಆಂಗ್ಲರ ವಿರುದ್ಧ ಸಿಹಿ – ಕಹಿ ಎರಡನ್ನು ಅನುಭವಿಸಿ ಏಕದಿನ ಬೌಲಿಂಗ್ ವಿಭಾಗದಲ್ಲಿ ಟಾಪ್ 10ರಲ್ಲಿ ಇದೇ ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ. ಇಷ್ಟೆ ಅಲ್ಲ ಟಪ್ 10ರಲ್ಲಿ ಸ್ಥಾನ ಪಡೆದಿರುವ ಕುಲ್‍ದೀಪ್ ಎರಡನೇ ಭಾರತೀಯ ಬೌಲರ್ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿ ಡೆತ್ ಓವರ್ ಸ್ಪೆಶಸಲಿಸ್ಟ್ ಜಸ್‍ಪ್ರೀತ್ ಬೂಮ್ರಾ ಸ್ಥಾನ ಪಡೆದಿದ್ದಾರೆ.