ವಿದೇಶದಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಬಂಧನ

 

ಬೆಂಗಳೂರು, ಜು.17-ವಿದೇಶದಿಂದ ಬಂದು ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‍ವೊಂದನ್ನು ಬಂಧಿಸಿರುವ ನಗರದ ಪೆÇಲೀಸರು ಅವರಿಂದ 80 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನಾಭರಣ, ಬೆಲೆಬಾಳುವ ವಾಚ್‍ಗಳು ಹಾಗೂ ವಿದೇಶಿ ಕರೆನ್ಸಿ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಪೆÇಲೀಸರು ಐದು ಜನ ಕೊಲಂಬಿಯಾ ದೇಶದ ಪ್ರಜೆಗಳನ್ನು ಬಂಧಿಸುವ ಮೂಲಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಗೌರಿಬಿದನೂರಿನ ಮಾಜಿ ಶಾಸಕರ ಮನೆ ಹಾಗೂ ಪ್ರೈಡ್ ಹೊಟೇಲ್ ಸೇರಿದಂತೆ 6 ಪ್ರಮುಖ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.
ಬಂಧಿತ ಆರೋಪಿಗಳು ಕೊಲಂಬಿಯಾ ದೇಶದವರಾಗಿದ್ದು, ಹೈಸ್ಕೂಲ್‍ವರೆಗೆ ವಿದ್ಯಾಭ್ಯಾಸ ಮಾಡಿ ಹೋಲ್‍ಸೇಲ್ ಗಾರ್ಮೆಂಟ್ಸ್ ಅಂಗಡಿ ಹೊಂದಿದ್ದ ಜೋಸ್ ಎಡ್ವರ್ಡ್ ಅರಿವಾಲೋ ಬರ್ಬಾನೋ (40), ಎಂಬಿಎ ಪದವೀಧರನಾಗಿದ್ದ ಗುಸ್ರಾವೋ ಅಡಾಲ್ಫೋ ಜರಾಮಿಲ್ಲೋ ಜಿರಾಲ್ಲೋ (47), ಹೈಸ್ಕೂಲ್‍ವರೆಗೂ ಓದಿ ವೆಲ್ಡಿಂಗ್ ಟ್ರೈನಿಂಗ್ ಪಡೆದಿದ್ದ ಯಾಯಿರ್ ಆಲ್ಬರ್ಟೋ ಸ್ಯಾಂಚಿಯಸ್ ಅಲಿಯಾಸ್ ರೋಝರ್ ಸ್ಮಿತ್ ಡ್ಯುಆರ್ಟೆ ಅಲಿಯಾಸ್ ಪೈಸಾ (45), ಫುಡ್ ಹ್ಯಾಂಡ್ಲಿಂಗ್ ಕೋರ್ಸ್ ಮಾಡಿದ್ದ ಎಡ್ವರ್ಡ್ ಎಲೆಕ್ಸಿಸ್ ಗಾರ್ಸಿಯಾ ಪರಮೋ (38), ಇಂಟರ್‍ನ್ಯಾಷನಲ್‍ಬ್ಯುಸಿನೆಸ್ ಟೆಕ್ನಾಲಜಿ ಪದವಿ ಓದಿ ಅರ್ಧಕ್ಕೇ ಓದು ನಿಲ್ಲಿಸಿದ್ದ ಶ್ರೀಮತಿ ಕಿಂಬರ್ಲಿ ಗುಟಿಯಾರೀಸ್ ಅವರುಗಳನ್ನು ಬಂಧಿಸಲಾಗಿದೆ.
ಈ ಆರೋಪಿಗಳು ಕೊಲಂಬಿಯಾ ಹಾಗೂ ಇತರೆ ದೇಶಗಳಲ್ಲಿ ಅಪರಾಧ ಚಟುವಟಿಕೆಯಲ್ಲಿ ಪಳಗಿದವರಾಗಿದ್ದು, ಜೋಸ್ ಎಡ್ವರ್ಡೋ ಅಕ್ರಮ ಪಿಸ್ತೂಲು ಹೊಂದಿದ್ದಕ್ಕಾಗಿ ಕೊಲಂಬಿಯಾದಲ್ಲಿ 5 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ. 2016ರಲ್ಲಿ ನೇಪಾಳದ ಮೂಲಕ ಭಾರತಕ್ಕೆ ಬಂದು, ಆಫ್ರಿಕನ್ ಪ್ರಜೆಯ ಪರಿಚಯ ಮಾಡಿಕೊಂಡು ಒಂದು ಮನೆ ಕಳ್ಳತನ ಮಾಡಿದ್ದಾನೆ.
ಗುಸ್ತಾವೋ ಅಡಾಲ್ಫೋ ಜರಾಮಿಲ್ಲೋ ಜಿರಾಲ್ಡೋ ಕೊಲಂಬಿಯಾದಲ್ಲಿ ಪೆÇಲೀಸ್ ಅಧಿಕಾರಿಯನ್ನು ಕೊಲೆ ಮಾಡಿ 16 ವರ್ಷ ಶಿಕ್ಷೆ ಅನುಭವಿ ಬಿಡುಗಡೆಯಾಗಿದ್ದಾನೆ.
ರೋಝರ್ ಸ್ಮಿತ್ ಡ್ಯುಆರ್ಟೆ ಕಾನೂನು ಬಾಹಿರವಾಗಿ ಅಮೆರಿಕದಲ್ಲಿ ವಾಸ ಮಾಡಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ ಗಡಿಪಾರು ಹೊಂದಿದ್ದಾನೆ.
ಎಡ್ವರ್ಡ್ ಎಲೆಕ್ಸಿಸ್ ಗಾರ್ಸಿಯಾ ಪರಮೋ ಮತ್ತು ಕಿಂಬರ್ಲಿ ಗುಟಿಯಾರೀಸ್ ಜೊತೆಗಾರರಾಗಿದ್ದು, ಅಮೆರಿಕದ ನ್ಯೂಯಾರ್ಕ್‍ನಲ್ಲಿ ಅಕ್ರಮ ವಾಸದ ಬಗ್ಗೆ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಈ ಎಲ್ಲಾ ಆರೋಪಿಗಳು ಸ್ಪಾನಿಷ್ ಭಾಷೆ ಮಾತ್ರ ತಿಳಿದುಕೊಂಡಿದ್ದು, ಯಾಯಿರ್ ಅಲ್ಬರ್ಟೋ ಸ್ಯಾಂಚಿಯಸ್ ಮಾತ್ರ ಇಂಗ್ಲೀಷ್ ಬಲ್ಲವನಾಗಿದ್ದಾನೆ.
ಈ ಆರೋಪಿಗಳು ನೇಪಾಳಕ್ಕೆ ಬಂದು ಅಲ್ಲಿಂದ ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದು ಕಳ್ಳತನ ಮಾಡುತ್ತಿದ್ದರು. 2010ರಲ್ಲಿ ಬೆಂಗಳೂರಿಗೆ ಬಂದು ಕಳ್ಳತನ ಮಾಡಿ ಹೋಗಿದ್ದಾರೆ. 2016ರಲ್ಲಿ ಗೌರಿಬಿದನೂರಿನ ಮಾಜಿ ಶಾಸಕರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. 2018ರ ಆರಂಭದಲ್ಲಿ ಕಳ್ಳತನ ಮಾಡಿ ವಾಪಸ್ ತೆರಳಿದ್ದಾರೆ. ಮತ್ತೆ ಮೇ 28 ರಂದು ಭಾರತಕ್ಕೆ ಬಂದ ಇವರು ಜೂನ್ ತಿಂಗಳಲ್ಲಿ ಬೆಂಗಳೂರಿಗೆ ಆಗಮಿಸಿ ಜಯನಗರದಲ್ಲಿ 2, ಜೆ.ಪಿ.ನಗರದಲ್ಲಿ ಎಚ್.ಎಸ್.ಆರ್ ಲೇಔಟ್, ಬಾಣಸವಾಡಿ, ಎಚ್‍ಎಎಲ್ ಠಾಣೆಗಳಲ್ಲಿ ತಲಾ ಒಂದೊಂದು ಮನೆ ಕಳ್ಳತನ ಮಾಡಿದ್ದಾರೆ.
ಇವರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಬುದ್ಧಿ ವಂತಿಕೆಯಿಂದ ಕಳ್ಳತನ ಮಾಡಿರುವುದನ್ನು ಪೆÇಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಗಳು ಭಾರತಕ್ಕೆ ಬರುವ ಮುಂಚೆಯೇ ಆನ್‍ಲೈನ್‍ನಲ್ಲಿ ಕಾರನ್ನು ಖರೀದಿಸುತ್ತಿದ್ದರು. ಮನೆ ಬಾಡಿಗೆ ಹಾಗೂ ಸರ್ವೀಸ್ ಅಪಾರ್ಟ್‍ಮೆಂಟ್‍ಗಳನ್ನು ಬಾಡಿಗೆಗೆ ಪಡೆದು ವಾಸಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು.
ಮೆಕ್ಸಿಕೋದಲ್ಲಿ ಖರೀದಿ ಮಾಡಿದ್ದ ನಾಲ್ಕು ವಾಕಿಟಾಕಿಗಳನ್ನು ತಂದಿದ್ದರು. ಎಲ್ಲರೂ ಕೊಲಂಬಿಯಾ ದೇಶದ ಪಾಸ್‍ಪೆÇೀಟ್ ಹೊಂದಿದ್ದು, ಯಾಯಿರ್ ಅಲ್ಬಟೋ ಸ್ಯಾಂಚಿಯಸ್ ಎಂಬಾತ ಅಮೆರಿಕಾದ ನಕಲಿ ಪಾಸ್‍ಪೆÇೀರ್ಟ್ ಹೊಂದಿದ್ದಾನೆ. ಬೆಂಗಳೂರಿಗೆ ಬಂದ ಒಂದು ವಾರದಲ್ಲಿ ಜೆ.ಸಿ.ರಸ್ತೆ, ಶಿವಾಜಿನಗರ, ಮಾರುಕಟ್ಟೆಗಳಲ್ಲಿ ಕಳ್ಳತನಕ್ಕೆ ಬೇಕಾದ ಗಡಾರಿ, ಮೆಟಲ್ ಕಟರ್‍ಹ್ಯಾಂಡ್ ಗ್ಲೌಸ್, ಕ್ಯಾಪ್ ಶೂಗಳು ಸೇರಿದಂತೆ ಕಳ್ಳತನಕ್ಕೆ ಬೇಕಾದ ಸಲಕರಣೆಗಳನ್ನು ಮತ್ತು ಫ್ರೀಪೇಯ್ಡ್ ಆಕ್ಟಿವೇಟೆಡ್ ಐಡಿ ಸಿಮ್‍ಗಳನ್ನು, 5 ಬೇಸಿಕ್ ಮೊಬೈಲ್ ಮೊಬೈಳ್ ಹ್ಯಾಂಡ್‍ಸೆಟ್‍ಗಳನ್ನು ಖರೀದಿಸಿದ್ದಾರೆ.
ಆರೋಪಿಗಳು ಕಾರಿನಲ್ಲಿ ಸುತ್ತಾಡುತ್ತಾ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದರು. ತಂಡದಲ್ಲಿದ್ದ ಮಹಿಳೆಯಾದ ಕಿಂಬರ್ಲಿ ಬುರುಖಾ ಹಾಕಿಕೊಂಡು ಆ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ನಂತರ ವಾಕಿಟಾಕಿ ಮೂಲಕ ಸ್ವಲ್ಪ ದೂರದಲ್ಲೇ ಕಾರಿನಲ್ಲಿದ್ದ ತಂಡದವರಿಗೆ ಮಾಹಿತಿ ನೀಡುತ್ತಿದ್ದಳು.
ಆರೋಪಿಗಳು ಮನೆಯ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದಾಗ ಈಕೆ ಹೊರಭಾಗದಲ್ಲಿ ನಿಂತು ಕಾವಲು ಕಾಯುತ್ತಿದ್ದಳು. ನಂತರ ಕಳ್ಳತನ ಮಾಡಿದ ಚಿನ್ನವನ್ನು ಕರಗಿಸಿ ಕಡ್ಡಿ ಆಕಾರದ ಗಟ್ಟಿಗಳನ್ನಾಗಿ ಶುದ್ಧ ಮಾಡಿಟ್ಟುಕೊಳ್ಳುತ್ತಿದ್ದರು.
ಚಿನ್ನದ ಕರಗಿಸುವ ತಂತ್ರಜ್ಞಾನವನ್ನು ಯೂಟ್ಯೂಬ್‍ನಲ್ಲಿ ನೋಡಿ ಕಲಿತುಕೊಂಡಿದ್ದರು ಪೆÇಲೀಸ್ ಆಯುಕ್ತರು ತಿಳಿಸಿದರು.
ಎಡ್ವಡ್ ಮತ್ತು ಗುಸ್ತಾವೋ 2016ರಲ್ಲಿ ಬೆಂಗಳೂರಿಗೆ ಬಂದು ಕಳ್ಳತನ ಮಾಡಿ ಹೋಗಿರುವ ಅನುಭವ ಇದ್ದಿದ್ದರಿಂದ ಮತ್ತು ಬೆಂಗಳೂರು ಐಟಿ ಹಾಗೂ ಬ್ಯುಸಿನೆಸ್ ಹಬ್ ಆಗಿದ್ದು, ಶ್ರೀಮಂತರೇ ಹೆಚ್ಚಾಗಿರುವುದರಿಂದ ಆರೋಪಿಗಳು ಬೆಂಗಳೂರಿನಲ್ಲಿ ಕಳ್ಳತನ ಮಾಡಲು ತಯಾರಿಮಾಡಿಕೊಂಡಿದ್ದರು.
ಆರೋಪಿಗಳ ತಂಡ:
ವಿದೇಶಿ ತಂಡವನ್ನು ಪತ್ತೆ ಹಚ್ಚಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪದ್ಧತಿಗಳನ್ನು ಪೆÇಲೀಸರು ಅನುಸರಿಸಿದ್ದಾರೆ. ಸಿಸಿ ಟಿವಿ ಫುಟೇಜ್ ಪರಿಶೀಲಿಸಿದಾಗ ಜುಲೈನಲ್ಲಿ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಸುತ್ತಾಡುತ್ತಿರುವ ಮಾಹಿತಿ ಲಭ್ಯವಾಗಿದೆ. ಅದನ್ನು ಆಧರಿಸಿ ಕಳ್ಳತನವಾದ ಮನೆಗಳಲ್ಲಿ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಯಿತು. ಒಎಲ್‍ಎಕ್ಸ್, ಫ್ಲಿಪ್‍ಕಾರ್ಡ್, ಅಮೆಜಾನ್‍ನಂತಹ ವೆಬ್‍ಸೈಟ್‍ಗಳನ್ನು ತೀವ್ರವಾಗಿ ಪರಿಶೀಲಿಸಲಾಯಿತು. ಹಾಗಾಗಿ ಆರೋಪಿಗಳ ಜಾಡು ಹಿಡಿದು ಡಿಸಿಪಿ ಡಾ.ಶರಣಪ್ಪ ನೇತೃತ್ವದಲ್ಲಿ ಎಸಿಪಿ ಎಚ್.ಶ್ರೀನಿವಾಸ್, ಪಿಐ ಎಸ್.ಟಿ.ಉಮಾಮಹೇಶ್, ನಾಗೇಶ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡಿ ಗೌರವಿಸುತ್ತ್ಟಿರುವಾಗಿ ಆಯುಕ್ತರಿಗೆ ತಿಳಿಸಿದರು.
ಸಾರ್ವಜನಿಕರಿಗೆ ಮುನ್ನೆಚ್ಚರಿಕೆ:
ವಿದೇಶಿ ಪ್ರಜೆಗಳು ಬೆಂಗಳೂರಿಗೆ ಬಂದಾಗ ಅವರಿಗೆ ಮನೆ ಬಾಡಿಗೆಗೆ ಕೊಡುವ ಮಾಲೀಕರು ವಿದೇಶಿ ಪ್ರಜೆಗಳ ಪಾಸ್‍ಪೆÇೀರ್ಟ್ ಹಾಗೂ ವೀಸಾ ಅವಧಿಯನ್ನು ಪರಿಶೀಲಿಸಬೇಕು. ಅದರ ಜೆರಾಕ್ಸ್ ಪ್ರತಿಗಳನ್ನು ಪಡೆದುಕೊಂಡು ಮನೆ ಬಾಡಿಗೆ ಕರಾರು ಪತ್ರದೊಂದಿಗೆ ದಾಖಲೆಗಳನ್ನು ಸಮೀಪದ ಪೆÇಲೀಸ್ ಠಾಣೆಗೆ ಸಲ್ಲಿಸಿ ಮಾಹಿತಿ ನೀಡಬೇಕು.
ಕೊಲಂಬಿಯಾ ದೇಶದ ಪ್ರಜೆಗಳಿಗೆ ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರು ಈ ರೀತಿಯ ನಿಯಮಗಳನ್ನು ಅನುಸರಿಸಿಲ್ಲ. ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ. ಆರೋಪಿಗಳಿಗೆ ಫ್ರೀಪೇಯ್ಡ್ ಸಿಮ್ ಮಾರಾಟ ಮಾಡಿರುವವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಇನ್ನು ವಿದೇಶಿಗರೊಂದಿಗೆ ವ್ಯವಹರಿಸುವಾಗ ನಾಗರಿಕರು ಎಚ್ಚರಿಕೆಯಿಂದಿರಬೇಕು ಮತ್ತು ಸಮೀಪದ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ