ಸ್ಮಾರ್ಟ್ ಫೆÇೀನ್‍ಗಾಗಿ ಗೆಳೆಯನನ್ನೇ ಕೊಂದ ಯುವಕ

ಹೈದರಾಬಾದ್, ಜು.17-ಸ್ಮಾರ್ಟ್ ಫೆÇೀನ್‍ಗಾಗಿ ತನ್ನ ಗೆಳೆಯನನ್ನೇ ಕೊಂದು ಸುಟ್ಟು ಹಾಕಿದ ಆರೋಪದ ಮೇಲೆ ಹೈದರಾಬಾದ್ ಪೆÇಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.
ಪ್ರೇಮ್ ಸಾಗರ್(19) ಬಂಧಿತ ಹಂತಕ. ಈತ ನೆರೆಮನೆಯ ಸ್ನೇಹಿತ 17 ವರ್ಷ ಪ್ರೇಮ್ ಎಂಬ ಅಪ್ರಾಪ್ತನನ್ನು ಮೊಬೈಲ್ ಫೆÇೀನ್ ವಿಚಾರವಾಗಿ ಕೊಂದು ಸುಟ್ಟು ಹಾಕಿದ ಆರೋಪಗೆ ಗುರಿಯಾಗಿದ್ದಾನೆ.
ಘಟನೆ ವಿವರ : ಮೋಟಾರ್ ಸೈಕಲ್‍ನಲ್ಲಿ ಪ್ರೇಮ್‍ನನ್ನು ಹೈದರಾಬಾದ್‍ನ ಉಪ್ಪಳ ಪ್ರದೇಶದಿಂದ ಲಾಂಗ್ ಡ್ರೈವ್ ಹೋಗೋಣ ಎಂದು ಹೇಳಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಆರೋಪಿಯು ಮರದ ರಂಬೆಯಿಂದ ಪ್ರೇಮ್ ತಲೆಗೆ ಬಲವಾಗಿ ಹೊಡೆದು ಕೊಂದು ಹಾಕಿದ. ನಂತರ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿ ಅಲ್ಲಿಂದ ಪರಾರಿಯಾದ. ಪ್ರೇಮ್ ಕಾಣೆಯಾದ ಕಾರಣ ಗಾಬರಿಯಾದ ಪೆÇೀಷಕರು ಪೆÇಲೀಸರಿಗೆ ದೂರು ನೀಡಿದರು. ತನಿಖೆ ಆರಂಭಿಸಿದ ಪೆÇಲೀಸರು ಆರೋಪಿ ಪ್ರೇಮ್ ಸಾಗರ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಸ್ಮಾರ್ಟ್ ಫೆÇೀನ್ ನೀಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ತಪೆÇ್ಪಪ್ಪಿಕೊಂಡಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ