ಮುಂಬೈ, ಜು.17-ರಸ್ತೆಗಳಲ್ಲಿನ ಗುಂಡಿಗಳು ಮತ್ತು ಅವ್ಯವಸ್ಥೆ ವಿರುದ್ಧ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ವಿನೂತನ ಪ್ರತಿಭಟನೆಯೊಂದು ನಡೆದಿದೆ. ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಕಾರ್ಯಕರ್ತರು ಇಂದು ನಸುಕಿನಲ್ಲಿ ಇಲ್ಲಿನ ಸಚಿವಾಲಯದ ಮುಂದಿನ ಪಾದಚಾರಿ ಮಾರ್ಗದಲ್ಲಿ ಹಳ್ಳಗಳನ್ನು ತೋಡಿ ಸರ್ಕಾರದ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಂಎನ್ಎಸ್ ಎಂಟು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು 3ರ ನಸುಕಿನಲ್ಲಿ ಸುಮಾರು 20 ಎಂಎನ್ಎಸ್ ಕಾರ್ಯಕರ್ತರು ಸಚಿವಾಲಯದ ಮುಂದಿನ ಫುಟ್ಪಾತ್ಅನ್ನು ಗುದ್ದಲಿ, ಹಾರೆ, ಪಿಕಾಸಿಗಳಿಂದ ತೊಡಿ ಹಳ್ಳಗಳನ್ನು ಮಾಡಿದರು. ಸಚಿವಾಲಯದಲ್ಲಿ ಕರ್ತವ್ಯದ ಮೇಲಿದ್ದ ಪೆÇಲೀಸರು ಇದನ್ನು ತಡೆಯಲು ಯತ್ನಿಸಿದಾಗ ಮಾತಿನ ಚಕಮಕಿ ನಡೆಯಿತು.
ನಂತರ ಪ್ರತಿಭಟನಾಕಾರರನ್ನು ಮರೈನ್ ಡ್ರೈವ್ ಪೆÇಲೀಸ್ ಠಾಣೆಗೆ ಕರೆದೊಯ್ಡು, ಅವರಲ್ಲಿ ಎಂಟು ಜನರನ್ನು ಬಂಧಿಸಲಾಯಿತು ಎಂದು ಡಿಸಿಪಿ ಮನೋಜ್ ಕುಮಾರ್ ಶರ್ಮ ತಿಳಿಸಿದ್ಧಾರೆ.