ನವದೆಹಲಿ:ಜು-17: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಿ ಮೂಲದ ಬಗ್ಗೆ ಮಾತನಾಡಿದ್ದ ಬಿಎಸ್ ಪಿ ರಾಷ್ಟ್ರೀಯ ಸಂಯೋಜಕನನ್ನು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ವಜಾಗೊಳಿಸಿದ್ದಾರೆ.
ಪಕ್ಷದ ಸಂಯೋಜಕ ಹುದ್ದೆಯಲ್ಲಿದ್ದ ಜೈ ಪ್ರಕಾಶ್ ಸಿಂಗ್ ಅವರನ್ನು ಹುದ್ದೆಯಿಂದ ವಜಾಗೊಳಿಸಿರುವ ಮಾಯಾವತಿ 2019 ರ ಲೋಕಸಭಾ ಚುನಾವಣೆಗೆ ಮೈತ್ರಿ ರಚನೆಯಾಗುವುದರ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವವರೆಗೂ ಪಕ್ಷದಲ್ಲಿ ಯಾರೊಬ್ಬರೂ ಮೈತ್ರಿಯ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ.
ವಿಪಕ್ಷಗಳ ನಾಯಕರ ವಿರುದ್ಧ ವೈಯಕ್ತಿಕ ವಿಷಯಗಳನ್ನಿಟ್ಟುಕೊಂಡು ವಾಗ್ದಾಳಿ ನಡೆಸಿರುವುದಕ್ಕಾಗಿ ಜೈ ಪ್ರಕಾಶ್ ಸಿಂಗ್ ಅವರನ್ನು ಪಕ್ಷದ ಸಂಯೋಜಕ ಹುದ್ದೆಯಿಂದ ವಜಾ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರ ವಿದೇಶಿ ಮೂಲವನ್ನು ಉಲ್ಲೇಖಿಸಿ ಮಾತನಾಡಿದ್ದ ಜೈ ಪ್ರಕಾಶ್ ಸಿಂಗ್ ರಾಹುಲ್ ಗಾಂಧಿ ಅವರ ತಾಯಿ ವಿದೇಶಿಗರಾಗಿರುವುದರಿಂದ ರಾಹುಲ್ ಗಾಂಧಿ ದೇಶದ ಪ್ರಧಾನಿಯಾಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದರು.
Mayawati sacks BSP’s national coordinator, directs members to not comment on possible alliances