ಬಾಲಕಿ ಮೇಲೆ 22 ಕಾಮುಕರ ಅಟ್ಟಹಾಸ: ಅಪಾರ್ಟ್ ಮೆಂಟ್ ನಲ್ಲಿ 7 ತಿಂಗಳಿಂದ ನಡೆದಿತ್ತು ನೀಚ ಕೃತ್ಯ

ಚೆನ್ನೈ:ಜು-17: 11 ವರ್ಷದ ಬಾಲಕಿ ಮೇಲೆ 22 ಜನ ಕಾಮುಕರು ನಿರಂತರವಾಗಿ ಅತ್ಯಾಚಾರ ನಡೆಸಿ, ಕೃತ್ಯವನ್ನು ವಿಡಿಯೋದಲ್ಲಿ ಚಿತ್ರೀಕರಿಸಿ ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಭಯಾನಕ ಘಟನೆ ಚೆನ್ನೈನ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಳಕಿಗೆ ಬಂದಿದೆ.

ಅಪಾರ್ಟ್​​ಮೆಂಟ್​​​ನಲ್ಲಿದ್ದ 11 ವರ್ಷದ ಬಾಲಕಿಗೆ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್​​, ಲಿಫ್ಟ್​​ ಆಪರೇಟರ್​ ಹಾಗೂ ವಾಟರ್​​ ಸಪ್ಲೈರ್ಸ್​​ ಸೇರಿದಂತೆ ಒಟ್ಟು 22 ಕಾಮುಕರು ಬಾಲಕಿ ಮೇಲೆ ಹಲವು ಬಾರಿ ಬಲತ್ಕಾರ ಎಸಗಿದ್ದಾರೆ.

ಈ 22 ಕಾಮುಕರ ಪೈಕಿ 18 ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದ್ದಾರೆ.

ಚೆನ್ನೈನ ಪಿರಸವಾಲ್ಕಂ ಅಪಾರ್ಟ್​​ಮೆಂಟ್​​​ನಲ್ಲಿ 7ನೇ ತರಗತಿ ಬಾಲಕಿ ಮೇಲೆ 7 ತಿಂಗಳಿಂದ ನಿರಂತರವಾಗಿ ಬಲತ್ಕಾರ ಎಸಲಾಗುತ್ತಿತ್ತು. ಇಂಜೆಕ್ಷನ್ ಹಾಗೂ ಮತ್ತು ಬರಿಸುವ ಪಾನೀಯವನ್ನು ಕುಡಿಸಿ ಬಾಲಕಿ ಮೇಲೆ ಕೃತ್ಯ ಎಸಲಾಗುತ್ತಿತ್ತು. ಅಲ್ಲದೇ, ಈ ಕೀಚಕರು ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಸಂತ್ರಸ್ತ ಬಾಲಕಿಗೆ ಬೆದರಿಕೆವೊಡಿದ್ದರು. ಹೀಗೆ ಸತತ 7 ತಿಂಗಳುಗಳ ಕಾಲ ಕಾಮುಕರು ಬಾಲಕಿ ಮೇಲೆ ಕೃತ್ಯ ಎಸಗಿದ್ದಾರೆ.

ಈ ನಡುವೆ ದೆಹಲಿಯಲ್ಲಿ ಓದುತ್ತಿರುವ ತನ್ನ ಹಿರಿಯ ಸಹೋದರಿ ಮನೆಗೆ ಬಂದಿದ್ದು, ಶನಿವಾರ ಕಾಮುಕರು ಅಟ್ಟಹಾಸವನ್ನು ಸಂತ್ರಸ್ತೆ ಬಿಚ್ಚಿಟ್ಟಿದ್ದಾಳೆ. ಅಂತೆಯೇ ಹಿರಿಯ ಸಹೋದರಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ 22 ಕಾಮುಕರ ಪೈಕಿ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಅಪಾರ್ಟ್​​ಮೆಂಟ್​​ 300 ಫ್ಲಾಟ್‌ಗಳಿಂದ ಕೂಡಿದ್ದು, ಮೊದಲ ಬಾರಿಗೆ ಲಿಫ್ಟ್​ ಆಪರೇಟರ್​​ ಆಗಿದ್ದ 66 ವರ್ಷದ ರವಿ ಕುಮಾರ್​ ಎಂಬುವವ ಬಾಲಕಿ ಮೇಲೆ ಎರಗಿದ್ದ. ಇದಾದ ಮೂರು ದಿನಗಳ ಬಳಿಕ ಇತರ ಇಬ್ಬರು ಕುಡುಕರ ಜೊತೆ ಬಂದು ಕೃತ್ಯ ಎಸಗಿದ್ದ. ನಂತರ ಹೀಗೆ ಇತರ ಕಾಮುಕರು ಸೇರಿಕೊಂಡು ನಿರಂತರವಾಗಿ ಬಲತ್ಕಾರ ನಡೆಸಿದ್ದರು ಎಂದು ಬಾಲಕಿ ಹೇಳಿಕೊಂಡಿದ್ದಾಳೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಆಕೆ ಮೇಲೆ ಹಲವು ಬಾರಿ, ಹಲವು ಜನ ಬಲತ್ಕಾರ ಎಸಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

11-year-old girl gang raped by 22 for 7 months in Chennai; 18 men including security guards arrested

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ