ಗಗನಸಖಿ ಕಟ್ಟಡದಿಂದ ಹಾರಿ ಆತ್ಮಹತ್ಯೆ

Varta Mitra News

ನವದೆಹಲಿ, ಜು.16-ಗಗನಸಖಿಯೊಬ್ಬರು ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿ ದೆಹಲಿಯ ಹೌಝ್ ಖಾಸ್ ಪ್ರದೇಶದಲ್ಲಿ ಶನಿವಾರ ನಡೆದಿದೆ.
ಅನಿಸಿಯಾ ಬಾತ್ರಾ (39) ಸಾವಿಗೆ ಶರಣಾದ ಗಗನಸಖಿ. ಇವರು ಜರ್ಮನ್ ಏರ್‍ಲೈನ್ಸ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ದಕ್ಷಿಣ ದೆಹಲಿಯಲ್ಲಿ ನಿನ್ನೆ ಸಂಜೆ 4.30ರಲ್ಲಿ ಈ ಘಟನೆ ನಡೆದಿದೆ. ಇವರಿಗೆ ಏಳು ವರ್ಷಗಳ ಹಿಂದೆ ವಿವಾಹವಾಗಿದ್ದು, ತಮ್ಮ ಪತಿಯೊಂದಿಗೆ ಹೌಝ್ ಖಾಸ್‍ನ ತಮ್ಮ ನಿವಾಸದಲ್ಲಿ ವಾಸವಾಗಿದ್ದರು.
ಈಕೆ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುನ್ನ ಕೆಲವು ನಿಮಿಷಗಳ ಹಿಂದೆ ಈ ಬಗ್ಗೆ ತಮ್ಮ ಪತಿಗೆ ಮೊಬೈಲ್ ಫೆÇೀನ್ ಮೂಲಕ ಎಸ್‍ಎಂಎಸ್ ಸಂದೇಶ ಕಳುಹಿಸಿದ್ದರು ಎಂದು ಡಿಸಿಪಿ(ದಕ್ಷಿಣ) ರೊಮಿಲ್ ಬಾನಿಯಾ ತಿಳಿಸಿದ್ದಾರೆ.
ತಮ್ಮ ಕಟ್ಟಡದ ತಾರಸಿಯಿಂದ ಕೆಳಗೆ ಜಿಗಿದು ತೀವ್ರ ಗಾಯಗೊಂಡಿದ್ದ ಅನಿಸಿಯಾ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟರು. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ