ರೋಚಕ ಫೈನಲ್‍ನಲ್ಲಿ ಫ್ರಾನ್ಸ್ 4-2 ಗೋಲುಗಳಿಂದ ಗೆಲುವು

MOSCOW, RUSSIA - JUNE 12 A Russian tourism shop selling a 2018 FIFA World Cup Russia football with flags of the competing nations on it in Moscow ahead of the 2018 FIFA World Cup Russia on June 12, 2018 in Moscow, Russia. (Photo by Matthew Ashton - AMA/Getty Images)

ಪ್ಯಾರಿಸ್, ಜು.16-ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ರೋಚಕ ಫೈನಲ್‍ನಲ್ಲಿ ಫ್ರಾನ್ಸ್ 4-2 ಗೋಲುಗಳಿಂದ ಕ್ರೊವೇಷ್ಯಾವನ್ನು ಮಣಿಸಿ ಫ್ರೆಂಚ್ ಕ್ರೀಡಾಪ್ರೇಮಿಗಳ ಮುಗಿಲು ಮುಟ್ಟಿದ ವಿಜಯೋತ್ಸವದ ಸಡಗರ-ಸಂಭ್ರಮಕ್ಕೆ ಕಾರಣವಾಯಿತು. ಫ್ರಾನ್ಸ್‍ನಲ್ಲಿ ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ವಿಜಯೋತ್ಸವದ ವೇಳೆ ಅಹಿತಕರ ಘಟನೆಗಳೂ ನಡೆದಿವೆ. ನಿನ್ನೆ ರಾತ್ರಿ ಮಾಸ್ಕೋದಲ್ಲಿ ನಡೆದ ಫೈನಲ್‍ನಲ್ಲಿ ಫ್ರಾನ್ಸ್ ವಿಜಯಿಯಾಗುತ್ತಿದ್ದಂತೆ ಪ್ಯಾರಿಸ್‍ನಲ್ಲಿ ಲP್ಷÁಂತರ ಮಂದಿ ಬೀದಿಗಿಳಿಸಿ ವಿಜಯೋತ್ಸವದ ಮೆರವಣಿಗೆ ಆಚರಿಸಿದರು. ಈ ಸಂದರ್ಭದಲ್ಲಿ ಗುಂಪೆÇಂದು ಚಾಂಪ್ಸ್ ಇಲಿಸೀ ಪ್ರದೇಶದಲ್ಲಿ ಅಸಭ್ಯ ನಡವಳಿಕೆಯಿಂದ ವಿಜಯೋತ್ಸವಕ್ಕೆ ಕಳಂಕ ತರಲು ಯತ್ನಿಸಿದಾಗ ಉದ್ರಿಕ್ತ ಗುಂಪನ್ನು ಚದುರಿಸಲು ಪೆÇಲೀಸರು ಬಲಪ್ರಯೋಗ ಮಾಡಬೇಕಾಯಿತು.
ವಿಜಯೋತ್ಸವದ ಸೋಗಿನಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ಹಾನಿಗೊಳಿಸಿ ಜನರಿಗೆ ಉಪದ್ರವ ನೀಡುತ್ತಿದ್ದ ಗುಂಪನ್ನು ಚದುರಿಸಲು ಮುಂದಾದಾಗ ಕೆಲವು ದುಷ್ಕರ್ಮಿಗಳು ಪೆÇಲೀಸರೊಂದಿಗೆ ಘರ್ಷಣೆಗೆ ಇಳಿದರು. ಪರಿಸ್ಥಿತಿ ಕೈ ಮೀರಿ ಹೋಗುವುದನ್ನು ತಪ್ಪಿಸಲು ಪೆÇಲೀಸರು ಆಶ್ರುವಾಯು ಸಿಡಿಸಿದಾಗ ಕೆಲವರು ಗಾಯಗೊಂಡರು.
ಪೆÇಲೀಸರತ್ತ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರನ್ನು ಚದುರಿಸಲು ಟಿಯರ್ ಗ್ಯಾಸ್ ಪ್ರಯೋಗಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ಯಾರಿಸ್, ಲಯೋನ್ ಸೇರಿದಂತೆ ಹಲವು ನಗರಗಳಲ್ಲಿ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿದೆ. ವಿಜಯೋತ್ಸವದ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ