ಮಾಸ್ಕೋ, ಜು.16- ರಷ್ಯಾದಲ್ಲಿ ನಡೆದ 21ನೆ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ನಿನ್ನೆ ವರ್ಣರಂಜಿತ ತೆರೆ ಬಿದ್ದಿದ್ದು, 22ನೆ ಆವೃತ್ತಿಯ ಫಿಫಾ ಕಾಲ್ಚೆಂಡಿನ ಪಂದ್ಯಾವಳಿ ಏಷ್ಯಾದ ಅರಬ್ ಗಣರಾಜ್ಯದ ಕತಾರ್ನಲ್ಲಿ 2022ರಲ್ಲಿ ನಡೆಯಲಿದೆ. ಕತಾರ್ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಆತಿಥ್ಯ ವಹಿಸುತ್ತಿರುವ ಯುಎಇನ ಪ್ರಥಮ ರಾಷ್ಟ್ರವಾಗಿದೆ. ನಿನ್ನೆ ನಡೆದ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2022ರ ಪಂದ್ಯಾವಳಿ ಹಕ್ಕು ಪಡೆದಿರುವ ಕತಾರ್ರ ಅಮಿರ್ಶೇಖ್ ತಮೀಮ್ ಬಿನ್ ಹಮೀದ್ ಅಲ್ಧಾನಿ ಅವರಿಗೆ ಸಾಂಕೇತಿಕ ಫುಟ್ಬಾಲ್ ಚೆಂಡನ್ನು ಹಸ್ತಾಂತರಿಸಿದರು. ಫಿಫಾ ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೋ ಉಪಸ್ಥಿತರಿದ್ದರು.